ಗುವಾಮ್ ಮೇಲೆ ಉ.ಕೊರಿಯಾ ದಾಳಿ ಆತಂಕ : ರಕ್ಷಣೆಗೆ ಕ್ಷಿಪಣಿ ವ್ಯವಸ್ಥೆ ಮಾಡಿಕೊಂಡ ಜಪಾನ್‍

ಈ ಸುದ್ದಿಯನ್ನು ಶೇರ್ ಮಾಡಿ

Japan--01

ಟೋಕಿಯೊ, ಆ.12-ಅಮೆರಿಕದ ಪೆಸಿಫಿಕ್ ಪ್ರಾಂತ್ಯದ ಗುವಾಮ್ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸುವುದಾಗಿ ಉತ್ತರ ಕೊರಿಯಾ ಗಂಭೀರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಪಾನ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಎದುರಾಗಬಹುದಾದ ಯಾವುದೇ ದಾಳಿಯನ್ನು ನಿಗ್ರಹಿಸಲು ಜಪಾನ್ ತನ್ನ ಪೆಟ್ರಿಯಾಟ್ ಅಡ್ವಾನ್ಸ್‍ಡ್ ಕ್ಯಾಪಬಿಲಿಟಿ=3(ಪಿಎಸಿ-3) ಕ್ಷಿಪಣಿ ವ್ಯವಸ್ಥೆಯನ್ನು ನಿಯೋಜಿಸಿದೆ.

ಉತ್ತರ ಕೊರಿಯ ಖಂಡಾಂತರ ಕ್ಷಿಪಣಿಗಳನ್ನು ಪದೇ ಪದೇ ಪರೀಕ್ಷೆಗೆ ಒಳಪಡಿಸಿದ ನಂತರ ಆ ದೇಶದ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಠಿಣ ಆರ್ಥಿಕ ದಿಗ್ಬಂಧನ ವಿಧಿಸಿದೆ. ಇದರಿಂದ ಆಕ್ರೋಶಗೊಂಡ ಉತ್ತರ ಕೊರಿಯಾ ಅಮೆರಿಕ ಮೇಲೆ ಸೇಡು ತೀರಿಸಿಕೊಳ್ಳುವ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮಿತ್ರ ರಾಷ್ಟ್ರವಾಗಿರುವ ಜಪಾನ್ ಗುವಾಮ್ ಸೇನಾ ನೆಲೆಯನ್ನು ರಕ್ಷಿಸಲು ಮುಂದಾಗಿದೆ.

Facebook Comments

Sri Raghav

Admin