ಗೂಂಡಾ ಕಾಯ್ದೆಯಡಿ ರೌಡಿ ರವಿಕುಮಾರ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Ravikumar--01

ಬೆಂಗಳೂರು,ಏ.21- ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿ ರೌಡಿ ರವಿಕುಮಾರ್‍ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಚೇಳೂರು ಪಾಳ್ಯದ ನಿವಾಸಿಯಾದ ರವಿಕುಮಾರ್ ವಿರುದ್ದ ಮಾಗಡಿ ರಸ್ತೆ, ವಿಜಯನಗರ ಮತ್ತು ಉಪ್ಪಾರಪೇಟೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿದೆ.  ಈತನು ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಹಲ್ಲೆ ಪ್ರಕರಣಗಳು, ಅಕ್ರಮ ಕೂಟ ಸೇರಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನು ಅಪರಾಧವೆಸಗುವ ಪ್ರವೃತ್ತಿಯುಳ್ಳನಾಗಿದ್ದು, ಸಮಾಜ ವಿದ್ರೋಹಿ ಮತ್ತು ಸಾರ್ವಜನಿಕರ ಸುವ್ಯಸ್ಥೆಗೆ ಭಂಗ ತರುವ ಚಟುವಟಿಕೆಗಳಿಂದ ತಡೆಗಟ್ಟಬೇಕಾದರೆ ಗೂಂಡಾ ಕಾಯ್ದೆಯಡಿ ಅಪರ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಪರಮೆಶ್ವರ್ ಹೆಗಡೆ ಮತ್ತು ಇನ್‍ಸ್ಪೆಕ್ಟರ್ ನಾಗೇಶ್.ಜಿ.ಎನ್. ಅವರು ಈತನ ವಿರುದ್ದ ವರದಿಯನ್ನು ತಯಾರು ಮಾಡಿ ಮಂಡಿಸಿದ ಮೇರೆಗೆ ಈತನನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು.

ವಿಜಯನಗರ ಪೊಲೀಸರು ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ರೌಡಿ ಅಸಾಮಿಗಳ ವಿರುದ್ಧ ಇನ್ನು ಮುಂದೆಯೂ ಸಹ ಇದೇ ರೀತಿ ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಡಿಸಿಪಿ ಎಚ್ಚರಿಸಿದ್ದಾರೆ.

Facebook Comments

Sri Raghav

Admin