ಗೂಡ್ಸ್ ಆಟೋ ಡಿಕ್ಕಿ : ವೃದ್ಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

hold-man-accident

ಹನೂರು, ಆ.25- ಗೂಡ್ಸ್ ಆಟೋವೊಂದು ಅಪರಿಚಿತ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿಯಿಂದ ಹನೂರು ಪಟ್ಟಣಕ್ಕೆ ಬುಟ್ಟಿ ಎಣೆಯುವ ಈಚಲ ಕಡ್ಡಿಯನ್ನು ಹೊತ್ತು ತಂದಿದ್ದ ಗೂಡ್ಸ್ ಆಟೋ ಕಡ್ಡಿಯನ್ನು ಅನ್‍ಲೋಡ್ ಮಾಡಿ ವಾಪಸ್ ಕೆ.ಎಂ.ದೊಡ್ಡಿಗೆ ತೆರಳುವಾಗ ಹನೂರು ಪಟ್ಟಣದ ಬಸ್ಸ್ ನಿಲ್ದಾಣದ ಸಮೀಪ ವಿನಯ್ ಟಿಫನೀಸ್ ಹೋಟೆಲ್ ಬಳಿ ಅಪರಿಚಿತ ವಯೋವೃದ್ಧರಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ವೃದ್ಧಿಗೆ ತಿ ತೀವ್ರ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ತಕ್ಷಣ ಆಟೋ ಚಾಲಕ ಜಯರಾಮ್ ಸಾರ್ವಜನಿಕರ ಸಹಾಯದಿಂದ ಸಮೀಪ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನಿಗಿದ್ದಾರೆ.ಸುದ್ದಿ ತಿಳಿದ ಪ್ರಭಾರ ವೃತ್ತ ನಿರೀಕ್ಷಕ ಗೋವಿಂದರಾಜು ಮತ್ತು ಹನೂರು ಠಾಣೆ ಮುಖ್ಯಪೇದೆ ಹೂವಯ್ಯ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ನಂತರ ವೃದ್ದನ ಶವನನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಟ್ಟು ಗೂಡ್ಸ್ ಆಟೋ ಮತ್ತು ಚಾಲಕ ಜಯರಾಮ್‍ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin