ಗೃಹಬಂಧನದಲ್ಲಿದ್ದಾರೆಯೇ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್..?

ಈ ಸುದ್ದಿಯನ್ನು ಶೇರ್ ಮಾಡಿ

Mulayam-Singh-Yadav

ಲಕ್ನೋ, ಜ.25-ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ಗೃಹಬಂಧನದಲ್ಲಿದ್ದಾರೆಯೇ? ಹೌದು ಎನ್ನುತ್ತಾರೆ ಲೋಕದಳ ರಾಷ್ಟ್ರೀಯ ಅಧ್ಯಕ್ಷ ಸುನಿಲ್ ಸಿಂಗ್. ಅಷ್ಟೇ ಅಲ್ಲ ಮುಲಾಯಂರನ್ನು ಮುಕ್ತಗೊಳಿಸುವಂತೆಯೂ ಅವರು ಕೇಂದ್ರ ಸರ್ಕಾರವನ್ನು ಅಗ್ರಹಿಸಿದ್ದಾರೆ.  ಲೋಕದಳಕ್ಕೆ ಮುಲಾಯಂ ಅವರ ಬೆಂಬಲವಿದೆ. ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅವರು ಬೆಂಬಲ ನೀಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ. ಆದರೆ ಮುಖ್ಯಮಂತ್ರಿ ಅಖಿಲೇಶ್ ಬಣ ಇದಕ್ಕೆ ಅಸ್ಪದ ನೀಡುತ್ತಿಲ್ಲ. ಅಲ್ಲದೇ ಅವರಿಗೆ ನಜರ್‍ಬಂದ್ (ಹೌಸ್ ಅರೆಸ್ಟ್ ಅಥವಾ ಗೃಹಬಂಧನ) ಹಾಕಲಾಗಿದೆ. ಅವರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡುತ್ತಿಲ್ಲ ಎಂದು ಸುನಿಲ್ ಸಿಂಗ್ ತಿಳಿಸಿದ್ದಾರೆ.

ಮುಲಾಯಂರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಬೇಕು ಮತ್ತು ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ತಾವು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin