ಗೃಹ ಬಳಕೆ LPG ಸಿಲಿಂಡರ್ ಬೆಲೆಯಲ್ಲಿ 2.07 ರೂ. ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

LPG-01

ನವದೆಹಲಿ, ಡಿ.1- ಗೃಹ ಬಳಕೆ, ಎಲ್‍ಪಿಜಿ ಸಿಲಿಂಡರ್‍ಗಳ (ಸಬ್ಸಿಡಿ ಸಹಿತ) ದರವನ್ನು ತತ್‍ಕ್ಷಣದಿಂದ ಜಾರಿಗೆ ಬರುವಂತೆ 2.07 ರೂ. ಏರಿಕೆ ಮಾಡಲಾಗಿದೆ. ಇದರ ಜತೆಗೆ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಬೆಲೆಯೂ ಸಹ 13 ಪೈಸೆ ಏರಿಕೆಯಾಗಿದೆ. ಮತ್ತು ಡೀಸೆಲ್ ಬೆಲೆಯಲ್ಲಿ 12 ಪೈಸೆ ಇಳಿಕೆ ಮಾಡಲಾಗಿದೆ.  ಕಳೆದ ಎರಡು ತಿಂಗಳ ಹಿಂದೆ ಎಲ್‍ಪಿಜಿ ದರವನ್ನು 1ರೂ. ಏರಿಕೆ ಮಾಡಲಾಗಿತ್ತು. ಆದರೆ, ಡಿಸೆಂಬರ್ ಆರಂಭದಲ್ಲೇ ಈಗ 2.07ರೂ. ಏರಿಸಿರುವುದಕ್ಕೆ ಗೃಹಿಣಿಯರು ಅಪಸ್ವರ ಎತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 70.96, ಡೀಸೆಲ್ ಬೆಲೆ 58.39 ಇದೆ. ಇದೆ ವೇಳೆ  ವಿಮಾನಗಳಿಗೆ ಬಳಸುವ ಜೆಟ್ ಇಂಧನದಲ್ಲಿ ಶೇ.3.7 ರಷ್ಟು ಇಳಿಕೆ ಮಾಡಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin