ಗೃಹ ಸಚಿವ ಪರಮೇಶ್ವರ್ ಅವರಿಂದ ತಿರುಪತಿಯಲ್ಲಿ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

asdgsgsg

ಬೆಂಗಳೂರು, ಆ.6-ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು ತಮ್ಮ ಕುಟುಂಬದವರು ಹಾಗೂ ಆಪ್ತರೊಂದಿಗೆ ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಇತ್ತೀಚೆಗೆ ಪೊಲೀಸ್ ಇಲಾ ಖೆಯಲ್ಲಿನ ಕೆಲವು ಘಟನೆಗಳು, ಮುಖ್ಯಮಂತ್ರಿಯವರ ಪುತ್ರನ ಸಾವು, ರೈತರ ಆತ್ಮಹತ್ಯೆ ಮುಂತಾದ ಘಟನೆಗಳಿಂದ ಬೇಸತ್ತಿದ್ದ ಅವರು ತಮ್ಮ ಅಭಿಮಾನಿಗಳು ಕಾರ್ಯಕರ್ತರಿಗೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬಾರದು. ಫ್ಲೆಕ್ಸ್, ಬ್ಯಾನರ್‍ಗಳನ್ನು ಕಟ್ಟಬಾರದು ಎಂದು ಸೂಚನೆ ನೀಡಿದ್ದರು. ಹಾಗಾಗಿ ಯಾವುದೇ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಕುಟುಂಬದವರು ಹಾಗೂ ಆಪ್ತರೊಂದಿಗೆ ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ತಿಮ್ಮಪ್ಪನ ಆಶೀರ್ವಾದ ಪಡೆದರು. ಪರಮೇಶ್ವರ್ ಅವರ ಜೊತೆ ಪತ್ನಿ, ಆಪ್ತರಾದ ಎ.ಸಿ.ಶ್ರೀನಿವಾಸ್, ವೇಣುಗೋಪಾಲ್, ಜಿ.ಸಿ.ಚಂದ್ರಶೇಖರ್ ಮತ್ತಿತರರಿದ್ದರು.

Facebook Comments

Sri Raghav

Admin