ಗೆಣಸಲ್ಲಿದೆ ಬಡವರ ಆರೋಗ್ಯದ ಗೆಲುವಿನ ಗುಟ್ಟು..!

ಈ ಸುದ್ದಿಯನ್ನು ಶೇರ್ ಮಾಡಿ

sweet-poatoto

ಗೆಣಸು ಗಡ್ಡೆ ರೂಪದಲ್ಲಿ ಲಭಿಸುವ ಒಂದು ಆರೋಗ್ಯಕರ ತರಕಾರಿ. ಇದನ್ನು ಆಂಗ್ಲಭಾಷೆಯಲ್ಲಿ ಸ್ವೀಟ್ ಪೊಟ್ಯಾಟೋ ಅಥವಾ ಯಾಮ್ಸ್ ಎಂದು ಕರೆಯುತ್ತಾರೆ. ಗೆಣಸಿನಲ್ಲಿ ಹಲವು ವಿಧಗಳಿವೆ. ಮರಗೆಣಸು, ಸಿಹಿಗೆಣಸು, ಕೆಂಪು ಗೆಣಸು, ಬಿಳಿ ಗೆಣಸು ಇತ್ಯಾದಿ. ಇದರಲ್ಲಿ ಸಿ ಜೀವಸತ್ವ ಹೇರಳ ಪ್ರಮಾಣದಲ್ಲಿದೆ. ಅಲ್ಲದೆ, ಪೊಟ್ಯಾಷಿಯಂ, ರಂಜಕ ಮತ್ತು ಕ್ಯಾಲ್ಸಿಯಂ ಲವಣಗಳು ಸಾಕಷ್ಟಿವೆ. ಗೆಣಸು ಬಡವರಿಗೆ ಪ್ರಾಣಾಧಾರ. ಆಹಾರ ಧಾನ್ಯ ಗಳ ಅಭಾವ ತಲೆದೋರಿದಾಗ ಗೆಣಸನ್ನು ಬೇಯಿಸಿ ಸೇವಿಸುವುದು ಹಿಂದಿನಿಂದ ರೂಡಿಗೆ ಬಂದಿದೆ.

sweet-poatoto-1

ತೇವಾಂಶ, ಸಸಾರಜನಕ, ಮೇದಸ್ಸು, ಖನಿಜಾಂಶ, ಕಾರ್ಬೋಹೈಡ್ರೇಟ್ಸ್, ಸುಣ್ಣ, ಮೆಗ್ನಿಷಿಯಂ, ಫಾಸ್ಪರಸ್, ಕಬ್ಬಿಣ, ರಂಜಕ ಆಕ್ಸಾಲಿಕ್ ಆಮ್ಲ, ಫೋಲಿಕ್ ಆಮ್ಲ, ನಿಕೋಟಿನ್ ಆಮ್ಲ, ಥಿಯಾಮಿನ್, ರಿಬೋಫ್ಲಾವಿನ್, ಬಿಟಾ ಕ್ಯಾರೋಟಿನ್, ಸತು, ಎ, ಬಿ ಮತ್ತು ಸಿ ಜೀವಸತ್ವಗಳು ಸಮೃದ್ಧವಾಗಿವೆ. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಉದರ ಉರಿ, ಆಸ್ತಮಾ, ಶ್ವಾಸಕೋಶ ಸೋಂಕು, ಸಂಧಿವಾತ ನಿವಾರಣೆಗೆ ಇದು ಸಹಕಾರಿ. ದೇಹದಲ್ಲಿನ ನೀರಿನ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ. ಕೃಶ ದೇಹದವರು ಗೆಣಸನ್ನು ಸೇವಿಸುತ್ತಾ ಇದ್ದಲ್ಲಿ ದೇಹ ತೂಕ ಹೆಚ್ಚಾಗುತ್ತದೆ. ಆದರೆ, ಗೆಣಸನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಸ್ವಲ್ಪಮಟ್ಟಿಗೆ ಹಾನಿಕರ. ಮಧುಮೇಹ ರೋಗಿಗಳ ಮೇಲೆ ಇದು ದುಷ್ಪರಿಣಾಮ ಬೀರಬಹುದು. ಗೆಣಸನ್ನು ತಿಂದ ನಂತರ ಸೋಂಪಿನ ಕಾಳುಸೇವಿಸುವುದು ಒಳ್ಳೆಯದು. ಗೆಣಸಿನಿಂದ ಪಲ್ಯ ತಯಾರಿಸುವುದು ಸಾಮಾನ್ಯ. ಗೆಣಸನ್ನು ಜಜ್ಜಿ ಕುದಿಯುವ ನೀರಿನಲ್ಲಿ ಬೇಯಿಸಿ ಗಂಜಿ ಅಥವಾ ರುಚಿಕರ ಪಾಯಸ ತಯಾರಿಸಬಹುದು. ಇದರಿಂದ ಗೊಜ್ಜು, ಹಲ್ವ ಇತ್ಯಾದಿ ಆಹಾರವನ್ನು ಸಿದ್ಧಪಡಿಸಬಹುದು.

Facebook Comments

Sri Raghav

Admin