ಗೆದ್ದ ಸಂತು : ಖಚಿತಪಡಿಸಿದ ಕೆ.ಮಂಜು

ಈ ಸುದ್ದಿಯನ್ನು ಶೇರ್ ಮಾಡಿ

Stright-Forw

ಕಳೆದ  ಶುಕ್ರವಾರ ಬಿಡುಗಡೆಯದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ನಿರ್ಮಾಪಕ ಕೆ.ಮಂಜು ಕೆಲ ಅಂತರ್ಜಾಲ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯಿಂದ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಚೆನ್ನಾಗಿ ಹೋಗುತ್ತಿರುವ ಚಿತ್ರಕ್ಕೆ ಈ ರೀತಿ ಅಪಪ್ರಚಾರ ಮಾಡುವುದರ ಮೂಲಕ ಪ್ರೇಕ್ಷಕರಲ್ಲಿ ತಪ್ಪುಕಲ್ಪನೆ ಮೂಡಿಸುವುದು ಸರಿಯಲ್ಲ, ವಿಷಯದ ಸತ್ಯಾಸತ್ಯತೆ ಅರಿತು ಪ್ರಕಟಿಸಿ ಎಂದು ಹೇಳಿದ್ದಾರೆ. ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರವು ಮೊದಲ ದಿನವೇ 2.82 ಕೋಟಿ ರೂ. ಗಳನ್ನು ಗಳಿಸಿದೆ. ಅಲ್ಲದೆ, ಎರಡನೇ ದಿನವೂ ಶೇ.20 ರಷ್ಟು ಹೆಚ್ಚಿನ ಗಳಿಕೆ ಕಂಡಿದೆ. ಮರುದಿನ ಭಾನುವಾರ ಕೂಡ ಕಲೆಕ್ಷನ್ ಇನ್ನೂ ರೈಸ್ ಆಗಿದೆ. ಅನುಮಾನವಿದ್ದರೆ, ನಮ್ಮ ವಿತರಕರಾದ ಜಯಣ್ಣ ಅವರ ಆಫೀಸ್‍ನಲ್ಲಿ ಡಿಸಿಆರ್ ಪರೀಕ್ಷಿಸಿ ಖಚಿತಪಡಿಸಿ ಕೊಳ್ಳಬಹುದು ಎಂದು ಕೆ.ಮಂಜು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡರು.

ರಾಜ್ಯದೆಡೆ  ರಿಲೀಸಾದ 222 ಚಿತ್ರಮಂದಿರಗಳಲ್ಲಿಯೂ ಸಂತು ಸ್ಟ್ರೈಟ್ ಫಾರ್ವರ್ಡ್ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮುಂದಿನ ವಾರ ಸುಮಾರು 50 ಚಿತ್ರಮಂದಿರಗಳನ್ನು ಹೆಚ್ಚಿಸುವ ಯೋಚನೆ ಕೂಡ ಇದೆ. ನಾನು ಈವರೆಗೆ 32 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ.  ಈ ಚಿತ್ರ ಸುಮಾರು 25 ಕೋಟಿಗೂ ಹೆಚ್ಚು ಗಳಿಕೆ ಮಾಡುತ್ತದೆ ಎಂದು ನನಗೆ ನಂಬಿಕೆ ಯಿದೆ. ಮತ್ತೊಂದು ಸಂತೋಷದ ಸಂಗತಿಯೆಂದರೆ, ಈ ಚಿತ್ರದ ರಿಮೇಕ್ ರೈಟ್ಸ್ ಬೇಕು ಎಂದು ತೆಲುಗಿನಲ್ಲಿ ಇಂದ್ರ, ಬದ್ರೀನಾಥ್, ನರಸಿಂಹರಾಜು ಮುಂತಾದ ಹಿಟ್ ಸಿನಿಮಾಗಳನ್ನು ಮಾಡಿದ ಖ್ಯಾತ ಬರಹಗಾರ ಚಿನ್ನಿಕೃಷ್ಣ ಅವರು ಕೇಳಿದ್ದಾರೆ  ಎಂದು ಕೂಡ ಕೆ. ಮಂಜು ಅವರು ಹೇಳಿದರು. ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ನಿರ್ದೇಶಕ ಮಹೇಶ್‍ರಾವ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದು ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin