ಗೆರಿಲ್ಲಾಗಳ ಪ್ರಮುಖ ರಹಸ್ಯತಾಣ ಪತ್ತೆ : ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ

ಈ ಸುದ್ದಿಯನ್ನು ಶೇರ್ ಮಾಡಿ

Gerrilla

ಜಮ್ಮು, ನ.8-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿಸಿರುವ ಸೇನಾಪಡೆಗಳು, ದೊಡಾ ಜಿಲ್ಲೆಯಲ್ಲಿ ಗೆರಿಲ್ಲಾಗಳ ಪ್ರಮುಖ ರಹಸ್ಯತಾಣವೊಂದನ್ನು ಮತ್ತೆ ಮಾಡಿ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಈ ದಾಳಿಗೆ ಕೆಲವೇ ನಿಮಿಷಗಳ ಹಿಂದೆ ಭಯೋತ್ಪಾದಕರು ಪರಾರಿಯಾಗಿದ್ದು, ಬೇಟೆ ಕಾರ್ಯ ಚುರುಕುಗೊಂಡಿದೆ.
ಖಚಿತ ಮಾಹಿತಿ ಮೇರೆಗೆ ಜಮ್ಮುವಿನ ದೊಡಾ ಜಿಲ್ಲೆಯ ಭದೆರ್ವಾದ ಬೈಯಾರು ಪದರ್ ತಹಸೀಲ್‍ನ ದಟ್ಟ ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಯೋಧರು ಮತ್ತು ಪೊಲೀಸರು ಭಯೋತ್ಪಾದಕರ ಅಡಗುತಾಣವನ್ನು ಪತ್ತೆ ಮಾಡಿದ್ದಾರೆ. ಸಮರಕ್ಕೆ ಸಿದ್ದವಾಗುವ ರೀತಿಯಲ್ಲೇ ಸಂಗ್ರಹಿಸಿಡಲಾಗಿದ್ದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಣೀಶ್ ಮೆಹ್ತಾ ಹೇಳಿದ್ದಾರೆ.

ಎತ್ತರದ ಶಿಖರದ ಮೇಲೆ ನೀರಿನ ಒರತೆಯೊಂದರ ಪಕ್ಕದ ಗುಹೆಯೊಂದರಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು, ಸಂವಹನ ಸಾಧನಗಳು ಮತ್ತಿತರ ಉಪಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.  ಎಕೆ-47 ರೈಫಲ್, 9 ಎಂಎಂ ಚೀನಾ ಪಿಸ್ತೂಲ್, 22 ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ (ಯುಜಿಬಿಎಲ್) ಜೊತೆ ಒಂದು ಸ್ಫೋಟ ವಾಹಕ ಸಾಧನ, 11 ಎಕೆ-47 ಮ್ಯಾಗಜಿನ್‍ಗಳು, 1,620 ಎಕೆ-47 ಬುಲೆಟ್‍ಗಳು, ಒಂದು ಎಕೆ-47 ಸೈಲೆನ್ಸರ್, 15 ಆರ್‍ಪಿಜಿ ರೌಂಡ್ಸ್‍ಗಳು, 150 ಕಚ್ಚಾ ರೈಫಲ್ ಗುಂಡುಗಳು, 8 ಚೀನಿ ಗ್ರೆನೇಡ್‍ಗಳು, 36 ಕೈ ಬಾಂಬ್‍ಗಳು, ಮತ್ತು 11 ಡಿಟೋನೇಟರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‍ನಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಯೋಧರು ಪಾಕಿಸ್ತಾನ ಬೆಂಬಲಿತ ಉಗ್ರನೊಬ್ಬನನ್ನು ಹೊಡೆದುರುಳಿಸಿದ್ದರು. ಈ ಎನ್‍ಕೌಂಟರ್‍ನಲ್ಲಿ ಇಬ್ಬರು ಸೇನಾ ಸಿಬ್ಬಂದಿಗೆ ಗಾಯಗಳಾಗಿದ್ದವು.  ಹತನಾದ ಹಿಜ್ಬುಲ್ ಮುಜಾಹಿದೀನ್ ಉಗ್ರ ಸದ್ದಾಂ ಹುಸೇನ್ ಮಿರ್‍ನಿಂದ ಹಿಜ್ಬು ಲ್ ಮುಜಾಹಿದ್ದೀನ್‍ನಿಂದ 1 ಎಕೆ-47 ರೈಫಲ್, ಐದು ಮ್ಯಾಗಝೈನ್‍ಗಳು, 119 ಗುಂಡುಗಳು ಹಾಗೂ ಒಂದು ಹ್ಯಾಂಡ್ ಗ್ರೆನೇಡ್‍ನನ್ನು ವಶಪಡಿಸಿಕೊಳ್ಳಲಾಗಿತ್ತು.  ಕಾಶ್ಮೀರ ಕಣಿವೆಯಲ್ಲಿ 300ಕ್ಕೂ ಹೆಚ್ಚು ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಸಕ್ರಿಯರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ರಾಜೇಂದ್ರ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಭಯೋತ್ಪಾದಕರ ಅಡಗುತಾಣಗಳು ಮತ್ತು ಉಗ್ರರ ಚಲನವಲನಗೂ ಪತ್ತೆಯಾಗುತ್ತಿವೆ.

► Follow us on –  Facebook / Twitter  / Google+

Facebook Comments

Sri Raghav

Admin