ಗೆಲುವಿನತ್ತ`ಹೆಬ್ಬುಲಿ’ ಓಟ

ಈ ಸುದ್ದಿಯನ್ನು ಶೇರ್ ಮಾಡಿ

10

ಕನ್ನಡದ ಅದ್ದೂರಿ ಚಿತ್ರವಾದ ಹೆಬ್ಬುಲಿ ಮೊನ್ನೆ ರಾಜ್ಯಾಧ್ಯಂತ  ರಿಲೀಸಾಗಿದೆ. ಅಲ್ಲದೆ ಈ ಚಿತ್ರ ಮೊದಲ ವಾರದಲ್ಲೇ ಉತ್ತಮ ಗಳಿಕೆಯೊಂದಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು ಮುನ್ನುಗ್ಗುತ್ತಿದ್ದು ಹಾಗೂ ಮಾಧ್ಯಮದವರು ನೀಡಿದ ಪ್ರೋತ್ಸಾಹದಿಂದಲೇ ನಮ್ಮ ಚಿತ್ರ ಎಲ್ಲರನ್ನೂ ತಲುಪಿದೆ ಎಂದು ನಿರ್ಮಾಪಕ ರಘುನಾಥ್ ಹೇಳಿದರು. ಇದೊಂದು ಔಪಚಾರಿಕ ಭೇಟಿ ಎನ್ನ ಬಹುದು. ಸಕ್ಸಸ್ ಮೀಟ್ ಮಾಡಲು ಇನ್ನು ಕಾಲಾವಕಾಶ ಇದೆ. ನಿಮಗೆಲ್ಲಾ ಧನ್ಯವಾದಗಳು ಎನ್ನುತ್ತಾರೆ ಮತ್ತೊಬ್ಬ ನಿರ್ಮಾಪಕರಾದ ಉಮಾಪತಿ. ಟೈಟಲ್ ಲಾಂಚ್ ಆದಾಗಿನಿಂದಲೂ ಇಲ್ಲಿಯವರೆಗೂ ಸುದ್ದಿಯನ್ನು ಎಲ್ಲರಿಗೂ ತಲುಪಿಸಿದ್ದೀರಾ. ಛಾಯಾಗ್ರಾಹಕನಾಗಿ ನಂತರ ಮೊದಲ ಬಾರಿ ಗಜಕೇಸರಿ ಚಿತ್ರದ ನಿರ್ದೇಶನ ಮಾಡಿದಾಗ ಬೆಂಬಲ ನೀಡಿದಂತೆ, ಹೆಬ್ಬುಲಿ ಗೆಲುವಿನಿಂದ ಹುರುಪು ಬಂದಿದೆ. ಇದೇ ರೀತಿ ಮುಂದೆಯೂ ಕೊಡಿ ಅಂತ ಅವಲತ್ತು ಮಾಡಿಕೊಂಡರು ನಿರ್ದೇಶಕ ಕೃಷ್ಣ.

ಎಲ್ಲರ ನಂತರ ಮಾತು ಶುರು ಮಾಡಿದ ಸುದೀಪ್ ಬುಧವಾರ ಮಧ್ಯರಾತ್ರಿ, ಗುರುವಾರ ಬೆಳಗಿನ ಜಾವ ಜನರು ಚಿತ್ರ ನೋಡಲು ಬಂದಿದ್ದು ಖುಷಿ ತಂದಿದೆ. ಈ ರೀತಿ ಚಿತ್ರಕ್ಕೆ ಪ್ರತಿಫಲ ಸಿಗುತ್ತದೆಂದು ಅಂದುಕೊಂಡಿರಲಿಲ್ಲ. ಒಳ್ಳೆ ವಿಮರ್ಶೆ ಬಂದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇದಕ್ಕೆ ಮಾಧ್ಯಮದವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಅದರ ಪ್ರತಿಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾ ನಿರ್ಮಾಪಕರು ದೇಶಿ ಪ್ರೇಕ್ಷಕರನ್ನು ಭೇಟಿ ಮಾಡಿಸುವ ಸಲುವಾಗಿ ದುಬೈ, ಲಂಡನ್ ದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಪ್ರಚಾರದ ಸಲುವಾಗಿ ರಾಜ್ಯಾಧ್ಯಂತ  ರೋಡ್‍ಶೋ ಹೋಗುವ ತಯಾರಿ ಮಾಡುತ್ತಿದ್ದೇವೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin