ಗೆಲುವಿನ ಉತ್ಸಾಹದಲ್ಲಿರುವ ಕರ್ನಾಟಕಕ್ಕೆ ಅಸ್ಸಾಮ್ ಸವಾಲು

ಈ ಸುದ್ದಿಯನ್ನು ಶೇರ್ ಮಾಡಿ

Karnatak

ಮುಂಬೈ, ಅ. 26- ಪ್ರಸಕ್ತ ರಣಜಿಯಲ್ಲಿ ನವದೆಹಲಿ ವಿರುದ್ಧ ಇನ್ನಿಂಗ್ಸ್ ಜಯ ಸಾಧಿಸಿ ವಿಜಯಯಾತ್ರೆಯನ್ನು ಮುಂದುವರೆಸಬೇಕೆಂಬ ಹುಮ್ಮಸ್ಸಿನಲ್ಲಿರುವ ಕರ್ನಾಟಕ ತಂಡವು ನಾಳೆಯಿಂದ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಸ್ಸಾಮ್ ತಂಡವನ್ನು ಎದುರಿಸಲಿದೆ. ಅಸ್ಸಾಮ್ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿ ಉನ್ಮುಕ್ತ್ ಚಾಂದ್ ನಾಯಕತ್ವದ ದೆಹಲಿ ವಿರುದ್ಧ ಇನ್ನಿಂಗ್ಸ್ ಸೋಲು ಕಂಡಿದ್ದರೂ ಕೂಡ ವಿನಯ್‍ಕುಮಾರ್ ನಾಯಕತ್ವದ ಕರ್ನಾಟಕ ತಂಡವನ್ನು ದಿಟ್ಟವಾಗಿ ಎದುರಿಸಲು ಸಜ್ಜಾಗಿದೆ ಎಂದು ತಂಡದ ನಾಯಕ ಗೋಕುಲ್ ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಲಯಕ್ಕೆ ಮರಳುವರೆ ಉತ್ತಪ್ಪ- ಮಯಾಂಕ್:

ಕರ್ನಾಟಕದ ಬ್ಯಾಟ್ಸ್‍ಮನ್‍ಗಳು ಸೌರಾಷ್ಟ್ರ ಹಾಗೂ ನವದೆಹಲಿ ವಿರುದ್ಧ ಉತ್ತಮ ಬ್ಯಾಟಿಂಗ್ ಅನ್ನೇ ಪ್ರದರ್ಶಿಸಿದ್ದರೂ ಕೂಡ ಆ ತಂಡದ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳಾಗಿ ಬಿಂಬಿಸಿಕೊಂಡಿರುವ ರಾಬಿನ್ ಉತ್ತಪ್ಪ ಹಾಗೂ ಮಯಾಂಕ್ ಅಗರ್‍ವಾಲ್‍ರಿಂದ ದೊಡ್ಡ ಇನ್ನಿಂಗ್ಸ್ ಕಟ್ಟಲು ಶಕ್ತರಾಗದಿರುವುದು ಅಭಿಮಾನಿಗಳಿಗೆ ತುಸು ಬೇಸರ ಮೂಡಿಸಿದ್ದು ಆಸ್ಸಾಮ್ ವಿರುದ್ಧದವರೂ ಅವರ ಬ್ಯಾಟ್ ಘರ್ಜಿಸುವುದೇ ಎಂಬುದನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.

ಸಮರ್ಥರಿಂದ ಉತ್ತಮ ಇನ್ನಿಂಗ್ಸ್:

ಕರ್ನಾಟಕದ ಯುವ ಆಟಗಾರ ಆರ್.ಸಮರ್ಥ್ ಅವರು ಬ್ಯಾಟಿಂಗ್ ಉತ್ತಮ ಲಯ ಕಂಡುಕೊಂಡಿದ್ದು ಸೌರಾಷ್ಟ್ರ ವಿರುದ್ಧ ದ್ವಿಶತಕ ಗಳಿಸಿ ನಂತರ ದೆಹಲಿ ವಿರುದ್ಧವು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ನಾಳೆಯಿಂದ ನಡೆಯುವ ಆಸ್ಸಾಮ್ ವಿರುದ್ಧವೂ ಉತ್ತಮ ಲಯದಿಂದ ಆಡುವ ಆಲೋಚನೆಯಲ್ಲಿದ್ದಾರೆ.

ಗೌತಮ್- ಶ್ರೇಯಾಸ್ ಗೋಪಾಲ್ ಮೋಡಿ:

ಸೌರಾಷ್ಟ್ರ ಹಾಗೂ ನವದೆಹಲಿ ತಂಡಗಳ ವಿರುದ್ಧ ಪಂದ್ಯದಲ್ಲಿ ತಮ್ಮ ಬೌಲಿಂಗ್ ಪ್ರದರ್ಶನದಿಂದ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕಿರುವ ಗೌತಮ್ ಹಾಗೂ ಶ್ರೇಯಾಸ್ ಗೋಪಾಲ್ ಜೋಡಿಯು ಎದುರಾಳಿಗಳಿಗೆ ಕಠಿಣ ಸವಾಲಾಗಿದ್ದು ಆಸ್ಸಾಂನಲ್ಲಿರುವ ಅರುಣ್‍ಕಾರ್ತಿಕ್, ಅಮಿತ್‍ವರ್ಮಾರಂತಹ ಬ್ಯಾಟ್ಸ್‍ಮನ್‍ಗಳನ್ನು ಕಟ್ಟಿಹಾಕಲು ರಣತಂತ್ರ ರೂಪಿಸಿದ್ದಾರೆ.

ಮತ್ತೆ ಮರಳಿರುವ ವಿನಯ್:

ನವದೆಹಲಿ ವಿರುದ್ಧದ ರಣಜಿ ಪಂದ್ಯದಿಂದ ತಂಡದಿಂದ ಹೊರಗುಳಿದಿದ್ದ ನಾಯಕ ವಿನಯ್‍ಕುಮಾರ್ ಅವರು ನಾಳೆಯಿಂದ ನಡೆಯಲಿರುವ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲಿದ್ದು ಬೌಲಿಂಗ್ ಬಲ ಹೆಚ್ಚಾಗಿದೆ. ಅತ್ತ ಅಸ್ಸಾಮ್ ತಂಡವು ಗೆಲುವಿನ ನಾಗಾಲೋಟದಲ್ಲಿ ಓಡುತ್ತಿರುವ ಕರ್ನಾಟಕ ತಂಡಕ್ಕೆ ಬ್ರೇಕ್ ಹಾಕಲು ಅನುಭವಿ ಹಾಗೂ ಹಿರಿಯ ಆಟಗಾರರು ಕೂಡ ರಣತಂತ್ರವನ್ನು ಹೆಣೆದಿದ್ದಾರೆ.

Facebook Comments

Sri Raghav

Admin