ಗೋಕಾಕ್ ಜಲಪಾತಕ್ಕೆ ಹಾರಿ ದಂಪತಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Gokak-Falkls

ಬೆಳಗಾವಿ, ಫೆ.5-ಜೀವನದಲ್ಲಿ ಜಿಗುಪ್ಸೆಗೊಂಡ ದಂಪತಿ ಇಲ್ಲಿನ ಗೋಕಾಕ್ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಗರದ ಖಡೆಬಜಾರ್ ನಿವಾಸಿಗಳಾದ ನ್ಯಾಮದೇವ ಔದಕರ್ (65) ಹಾಗೂ ಸುಮಿತ್ರಾ ಔದಕರ್ (58) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳಾಗಿದ್ದಾರೆ. ಇವರು ನಿನ್ನೆ ಮನೆಯಿಂದ ಜೊತೆಯಾಗಿ ಹೊರಗೆ ಹೋಗಿದ್ದಾರೆ. ಗೋಕಾಕ್ ಜಲಪಾತದ ಸ್ಥಳಕ್ಕೆ ರಾತ್ರಿ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಶವವನ್ನು ಇಂದು ಬೆಳಗ್ಗೆ ಪತ್ತೆ ಹಚ್ಚಲಾಗಿದ್ದು, ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin