ಗೋಡೌನ್‍ಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ಹತ್ತಿ , ತೊಗರಿ ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ವಿಜಯಪುರ, ಮಾ.10- ಶಾರ್ಟ್ ಸಕ್ರ್ಯೂಟ್‍ನಿಂದ ತೊಗರಿ ಹಾಗೂ ಹತ್ತಿ ಗೋಡೌನ್‍ಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಂಧಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಎಸ್‍ವಿ ಮಾಗಣಗೇರಿ ಎಂಬುವರಿಗೆ ಸೇರಿದ ಗೋಡೌನ್‍ನಲ್ಲಿ ಸಂಗ್ರಹಿಸಿಡಲಾಗಿದ್ದ ಹತ್ತಿ ಹಾಗೂ ತೊಗರಿ ಬೆಂಕಿಗೆ ಆಹುತಿಯಾಗಿದೆ. ಸಂಗ್ರಹಾಗಾರದಲ್ಲಿ 400 ಚೀಲ ತೊಗರಿ ಹಾಗೂ 120 ಚೀಲ ಹತ್ತಿ ಇಡಲಾಗಿತ್ತು. ಬೆಂಕಿಯ ಕೆನ್ನಾಲಿಗೆಗೆ ಇಷ್ಟು ತೊಗರಿ ಮತ್ತು ಹತ್ತಿ ಬೆಂಕಿಗೆ ಸಿಲುಕಿ ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಧಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin