ಥಾಣೆ ಗೋದಾಮೊಂದರಲ್ಲಿ ಬೆಂಕಿ ಆಕಸ್ಮಿಕ, ನಾಲ್ವರ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

hut-on-fire

ಥಾಣೆ, ಫೆ.20- ಗೋದಾಮೊಂದರಲ್ಲಿ ಬೆಂಕಿ ಆಕಸ್ಮಿಕದಿಂದ ನಾಲ್ವರು ಸುಟ್ಟು ಕರಕಲಾಗಿ, ಕೆಲವರು ತೀವ್ರ ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿದ್ಯುತ್‍ಮಗ್ಗ ಪಟ್ಟಣವಾದ ಭಿವಿಂಡಿಯಲ್ಲಿ ಸಂಭವಿಸಿದೆ. ದಪೋಡಾ ಹರಿಹರ್ ಕಾಂಪ್ಲೆಕ್ಸ್‍ನ ಗೋದಾಮಿನಲ್ಲಿ ನಿನ್ನೆ ಅಪರಾಹ್ನ ಈ ಭೀಕರದುರಂತ ಸಂಭವಿಸಿದೆ ಎಂದು ಥಾಣೆ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.ಭಾನುವಾರ ಗೋದಾಮಿಗೆ ರಜೆ ಇದ್ದರೂ ಇವರೆಲ್ಲ ಅಲ್ಲಿ ಏನು ಮಾಡುತ್ತಿದ್ದರು ಹಾಗೂ ಅವರು ಯಾರು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ.  ಈ ದುರಂತದಲ್ಲಿ ಇಬ್ಬರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಸಂಭವಿಸಿದ ಎರಡನೇ ಬೆಂಕಿ ದುರಂತ ಇದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin