ಗೋನಾಳ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಮೊಸಳೆ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

1

ಮುದ್ದೇಬಿಹಾಳ,ಮಾ.22- ಹಲವು ದಿನಗಳಿಂದ ಕೃಷ್ಣಾ ನದಿ ಹಿಂಭಾಗದಲ್ಲಿರುವ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಗೋನಾಳ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಹಾಗೂ ಪೊಲೀಸರು ಯಶ್ವಸಿಯಾಗಿದ್ದಾರೆ.ಸುಮಾರು ದಿನಗಳಿಂದ ಹೊಲ-ಗದ್ದೆಗಳಲ್ಲಿ ಮೊಸಳೆ ಕಾಣಿಕೊಳ್ಳುವ ಮೂಲಕ ರೈತರು ಹಾಗೂ ಗ್ರಾಮಸ್ಥರು ಭಯದ ವಾತಾವರಣದಲ್ಲಿದ್ದರು. ಆದ್ರೆ ಇಂದು ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಯಶಸ್ವಿ ಕಾರ್ಯಾಚರಣೆಯಿಂದ ಮೊಸಳೆ ಸೆರೆ ಹಿಡಿದಿದ್ದಾರೆ. 10ಅಡಿ ಮೊಸಳೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin