ಗೋಪಾಲಪುರ ಕೆರೆ ಪುನಶ್ಚೇತನಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

huliyar-2

ಹುಳಿಯಾರು, ಏ.24-ಹತ್ತಾರು ಹಳ್ಳಿಗಳ ಜಲ ಮೂಲವಾದ ಹುಳಿಯಾರು ಸಮೀಪದ ಗೋಪಾಲಪುರ ಕೆರೆ ಪುನಶ್ಚೇತನ ಮಾಡುವಂತೆ ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗುಡ್ಡದಸಾಲಿನಿಂದ ಹರಿದು ಬರುವ ನೀರು ಹಾಗೂ ಹಂದನಕೆರೆ ಭಾಗದ ಐದಾರು ಕೆರೆಗಳ ನೀರಿನಿಂದ ಗೋಪಾಲಪುರ ಕೆರೆ ತುಂಬುತ್ತದೆ. ದಶಕಗಳ ಹಿಂದಂತೂ ಪ್ರತಿ ವರ್ಷ ಈ ಕೆರೆ ನೀರಿನಿಂದ ನೂರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಅಲ್ಲದೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಅಂತರ್ಜಲ ವೃದ್ಧಿಗೆ ಕಾರಣವಾಗಿತ್ತು. ಆದರೆ ಈಗಲೂ ಎರಡ್ಮೂರು ಮಳೆಗೆ ಕೆರೆ ಭರ್ತಿಯಾಗುತ್ತದೆಯಾದರೂ ಬಹಳ ದಿನಗಳ ಕಾಲ ನೀರು ಸಂಗ್ರಹವಾಗದೆ ಭತ್ತ ಬೆಳೆಯುವುದಿರಲಿ ದನ, ಕರು, ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ಸಹ ನೀರು ಸಿಗದಾಗಿದೆ ಎಂದು ತಿಳಿಸಿದ್ದಾರೆ.

ಆರೇಳು ದಶಕಗಳಿಂದ ಕಾಲಕಾಲಕ್ಕೆ ಕೆರೆಯಲ್ಲಿನ ಹೂಳು ತೆಗೆಯದೆ ನಿರ್ಲಕ್ಷ್ಯಿಸಿರುವುದರಿಂದ ಇಂದು ಕೆರೆಯಲ್ಲಿ ಸಿಕ್ಕಾಪಟ್ಟೆ ಹೂಳು ಸಂಗ್ರಹವಾಗಿದೆ. ಹಾಗಾಗಿ ಬಿದ್ದ ಅಲ್ಪ ಮಳೆಗೆ ಕೆರೆ ತುಂಬುತ್ತದೆ ಅಷ್ಟೇ ವೇಗವಾಗಿ ನೀರು ಖಾಲಿಯಾಗುತ್ತದೆ. ಹಾಗಾಗಿ ಈ ಭಾಗದ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಅಂತರ್ಜಲ ಬತ್ತಿಹೋಗಿದೆ. ಕೆಲವು ಹಳ್ಳಿಗಳಲ್ಲಿ ಕುಡಿಯಲು ಸಹ ನೀರಿಲ್ಲದೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ ತೆಂಗಿನ ತೋಟಗಳು ಒಣಗುತ್ತಿದೆ ಎಂದು ನೀರಿನ ಸಮಸ್ಯೆ ವಿವರಿಸಿದರು.ಏರಿ ಶಿಥಿಲಗೊಂಡಿದ್ದು ಕೆರೆ ತುಂಬಿದಾಗಲೆಲ್ಲಾ ನೀರು ಪೋ ಲಾಗುತ್ತದೆ. ಹಾಗಾಗಿ ಸಣ್ಣ ನೀರಾವರಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಕೆರೆ ಅಭಿವೃದ್ಧಿ ಮಾಡುವ ಮೂಲಕ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಕೊಟ್ಟು ಮುಂಗಾರು ಮಳೆಯ ನೀರನ್ನಾದರೂ ಹೆಚ್ಚು ಸಂಗ್ರಹಿಸಿಟ್ಟುಕೊಳ್ಳುವ ಸಾಮಥ್ರ್ಯ ಕಲ್ಪಿಸಿ ಈ ಭಾಗದ ರೈತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin