ಗೋಮಾತೆ ರಕ್ಷಿಸಿ ಉಳಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ

ಈ ಸುದ್ದಿಯನ್ನು ಶೇರ್ ಮಾಡಿ

11

ಇಳಕಲ್,ಜ.3- ಗೋಮಾತೆ ಎಂದರೆ ಭಾರತಿಯರಿಗೆ ಜೀವನಾಡಿ ಇದ್ದಂತೆ. ಕಾರಣ ಪುಣ್ಯಕೋಟಿಯ ಸಂಕುಲವೇ ಇಂದು ಸಮಾಜಕ್ಕೆ ತಬ್ಬಲಿಯು ನೀನಾದೆ ಮಗನೆ ಎನ್ನುವಂತಿದ್ದು ಗೋಮಾತೆಯನ್ನು ರಕ್ಷಿಸಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಶ್ರೀ ರಾಮಚಂದ್ರಾ ಪೂರಮಠದ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳು ನುಡಿದರು.ಇಲ್ಲಿಯ ಶ್ರೀ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಸಂಸ್ಕೃತಿ  ಪ್ರಸಾರ ಮಂಡಳಿಯವರು ಮಂಗಲ ಗೋಯಾತ್ರೆ ಮೆರವಣಿಗೆ ಮುಗಿದ ನಂತರ ನಡೆದ ಧಾರ್ಮಿಕ ಸಭೈಯಲ್ಲಿ ಆಶೀರ್ವಚನ ನೀಡುತ್ತ ಗೋವು ಇದ್ದರೆ ಶಿವ ಇದ್ದಂತೆ ಇಲ್ಲದಿದ್ದರೆ ಶವ ಇದ್ದಂತೆ ಎನ್ನುತ್ತ ಬ್ರಿಟೀಷರು ಗೋವುಗಳ ನಾಶ ಮಾಡುವದಕ್ಕೆ ಕಸಾಯಿ ಖಾನೆಯನ್ನು ಪ್ರಾರಂಭಿಸಿದರು. ಅದನ್ನು ಇಂದು ನಮ್ಮ ಜನತೆ ಮುಂದುವರಿಸಿಕೊಂಡು ಹೋಗುತ್ತಿರುವುದು ನಮ್ಮಗಳ ದುರಂತವೆ ಸರಿ ಎಂದರು.

ಕಸಾಯಿ ಖಾನೆಯನ್ನು ಮುಚ್ಚುವುದು ಸರಕಾರದಿಂದ ಸಾಧ್ಯವಾಗು ವದಿಲ್ಲ. ಜನತೆ ಸ್ವತ: ಗೋಮಾಂಸವನ್ನು ತಿನ್ನುವುದನ್ನು ಬಿಡಬೇಕು.
ಆಗ ಕಸಾಯಿ ಖಾನೆಗಳು ತಮ್ಮಿಂದ ತಾವೇ ಬಂದಾಗುತ್ತವೆ. ಗೋವು ಭಾರತದ ರಕ್ಷಕ, ಪ್ರಾಣ ಇದ್ದಂತೆ. ಯಾವ ಕ್ಷೇತ್ರದಲ್ಲಿ ಹೋದರು ಅಲ್ಲಿ ಗೋಮಾತೆಯದು ಪ್ರಮುಖ ಪಾತ್ರ ಒಂದಲ್ಲಿದ ಒಂದು ರೀತಿಯಲ್ಲಿ ಇರುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.ಸಾನಿಧ್ಯ ವಹಿಸಿದ್ದ ನಂದವಾಡಗಿ ಶ್ರೀ ಮಹಾಂತಲಿಂಗ ಶಿವಾಚಾರ್ಯರು ರೈತರು ಗೋವುಗಳನ್ನು ವಯಸ್ಸಾದ ನಂತರ ಕಸಾಯಿ ಖಾನೆಗೆ ಮಾರದೆ ಗೋ ಶಾಲೆಗೆ ಕಳಿಸಬೇಕು ಎಂದರು. ಗುಳೇದಗುಡ್ಡದ ಶ್ರೀ ಕಾಶೀನಾಥ ಸ್ವಾಮಿಗಳು ಮಾತನಾಡಿದರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ದೇಶಿಯ ಗೋವುಗಳ ಮಹತ್ವವನ್ನು ಇಡೀ ಪ್ರಪಂಚಕ್ಕೆ ಪರೀಚಯ ಮಾಡಿಕೊಟ್ಟವರು ರಾಮಚಂದ್ರಪುರಮಠದ ಶ್ರೀಗಳು ಎಂದು ಹೆಳಿದರು.

ಗಂವ್ಹಾರದ ಸೋಪಾನನಾಥ ಸ್ವಾಮಿಗಳು, ಗುಳೇದಗುಡ್ಡದ ಕಾಶೀನಾಥ ಶ್ರೀಗಳು, ಅಮೀನಗಡದ ಪ್ರಭುರಾಜೇಂದ್ರ ಶ್ರೀಗಳು, ಕಮತಗಿಯ ಹುಚ್ಚೇಶ್ವರ ಶ್ರೀಗಳು, ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯರು ಹಿರೇಮಠ, ಗದಗದ ಗುರುಸಿದ್ದೇಶ್ವರ ಶಿವಾಚಾರ್ಯರು ಹಿರೇಮಠ, ಕೋಟಿಕಲ್ಲದ ನೀಲಕಂಠ ಶಿವಾಚಾರ್ಯರು, ಕಮತಗಿ ಶಿವಕುಮಾರ ಶಿವಾಚಾರ್ಯರು ಮತ್ತು ಕೋಟಿಕಲ್ಲದ ಬಸಯ್ಯಸ್ವಾಮಿಗಳು,ರುಧ್ರಪ್ಪಜ್ಜನವರು ಹಲವಾರು ಹರ-ಗುರು-ಶಿವಾಚಾರ್ಯರು, ಸಾಧು, ಸಂತರು ಹಾಗೂ ಶರಣರು ಗೋಯಾತ್ರೆ ಮತ್ತು ಧಾರ್ಮಿಕ ಸಭೈಯಲ್ಲಿ ಭಾಗವಸಿದ್ದರು. ಗೋ ಸೇವಾ ಕಾರ್ಯಕ್ಕೆ ಸೇವೆ ಸಲ್ಲಿಸಿದ 25 ಮಹನೀಯರಿಗೆ ಗೌರವಿಸಿ ಸತ್ಕರಿಸಲಾಯಿತು.

ಸ್ನೇಹರಂಗದ ಮಹಾಂತೇಶ ಗಜೇಂದ್ರಗಡ ನಿರ್ದೇಶನದ ಪುಣ್ಯಕೋಟಿ ಗೋ ರೂಪಕವನ್ನು ಚಿತ್ತರಗಿ ಶ್ರೀ ವಿಜಯಮಹಾಂತೇಶ ಫ್ರೌಢ ಶಾಲೆಯ ವಿಧ್ಯಾರ್ಥಿಗಳು ಹೃದಯ ಸ್ಪರ್ಶಿಯಾಗಿ ಮನೋಜ್ಞವಾಗಿ ಅಭಿನಯಿಸಿದ್ದು ಎಲ್ಲರ ಗಮನ ಸೆಳೆಯಿತು. ಗೋಕರ್ಣದ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಅಡಿಯಲ್ಲಿ ಮುದ್ದೆಬಿಹಾಳದಿಂದ ಬಂದ ಮಂಗಲ ಗೋಯಾತ್ರೆಯನ್ನು ಕಂಠಿ ವೃತ್ತದಿಂದ ವಾಧ್ಯ ವೈಭವ, ಮಹಿಳೆಯರಿಂದ ಕೋಲಾಟ, ಭಜನೆ ಹಾಗೂ ಪೂರ್ಣ ಕುಂಬ ಕಲಶಾರತಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪೂಜ್ಯರು, ಸಂತರು, ಅನೇಕ ಯುವಕರು ಗೋಗೀತೆಯನ್ನು ಹಾಡುತ್ತ ಸಾಗಿದ್ದರು. ಶರಣರ ಸಹಚರ್ಯದೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ಮಾಡಿ ಸಾಯಂಕಾಲ 5-30ಕ್ಕೆ ಶ್ರೀ ವಿಜಯ ಮಹಾಂತೇಶ ಅನುಭವ ಮಂಟಪಕ್ಕೆ ಬಂದು ಧಾರ್ಮಿಕ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin