ಗೋಮಾಳದಲ್ಲಿ ತ್ಯಾಜ್ಯ ಘಟಕ ಪೂರ್ಣಗೊಳಿಸಲು ಪಿಡಿಒಗಳಿಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

srinivaspura

ಶ್ರೀನಿವಾಸಪುರ, ಸೆ.21- ತಾಲೂಕಿನ ಗೋಮಾಳದಲ್ಲಿ   40X60 ಜಾಗ ಮೀಸಲಿಟ್ಟು ಘನ ಹಾಗೂ ದ್ರವ ತ್ಯಾಜ್ಯ ಘಟಕಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಪಿಡಿಒಗಳಿಗೆ ಸೂಚಿಸಿದರು.  ನಿನ್ನೆ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಯಡಿ ನಡೆದಿರುವ ಕಾಮಗಾರಿಗಳ ವಿವರ ನರೇಗಾ ಸಂಭಂದಿಸಿದ ಕಾಮಗಾರಿಗಳು, ಒಕ್ಕಣೆ ಕಣ, ಆಟದ ಮೈದಾನ, ಕುರಿದೊಡ್ಡಿಗಳು ಸೇರಿದಂತೆ ಸ್ಮಶಾನಗಳು, ಹಳೆಯ ಕಲ್ಯಾಣಿಗಳನ್ನು ಪುನಃಶ್ಚೇತನಗೊಳಿಸಲು ಹೂಳು ತೆಗೆಯುವುದು ಸಮತಟ್ಟು ಮಾಡುವ ಕಾಮಗಾರಿಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಸಬೇಕು ಎಂದು ಆದೇಶಿಸಿದರು.

ಶಾಲಾ ಕಾಂಪೌಂಡ್ ಮೈದಾನಗಳನ್ನು ಅಭಿವೃದ್ಧಿಪಡಿಸಬೇಕು. ನರೇಗ ಯೋಜನೆ ಕಾಮಗಾರಿ ನಡೆದಿರುವ ದಾಖಲೆಗಳ ಪರಿಶೀಲನೆ ಸ್ವಚ್ಛ ಭಾರತ್ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಜಾಬ್ ಕಾರ್ಡ್ ಮತ್ತು ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿಯೊಬ್ಬ ನಾಗರಿಕರು ಉಳಿತಾಯ ಖಾತೆ ಮಾಡಿಸಬೇಕೆಂದು ಹೇಳಿದರು.ಈ ವೇಳೆ ಕೆಲವು ಅಧಿಕಾರಿಗಳ ಅಶಿಸ್ತು ವರ್ತನೆ ಕಂಡು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಶಿಸ್ತಿನಿಂದ ವರ್ತಿಸಬೇಕು. ಹಿರಿಯ ಅಧಿಕಾರಿಗಳಿಗೆ ಗೌರವ ನೀಡಲು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಹಾಜರಾಗುವ ವೇಳೆ ಮೊಬೈಲ್ ಸಂಭಾಷಣೆ ಮಾಡದೆ ಪ್ರಗತಿ ಪರಿಶೀಲನೆ ವೇಳೆ ಪ್ರಶ್ನಿಸಿದ ವಿಷಯ ಬಗ್ಗೆ ವಿವರಣೆ ನೀಡಬೇಕು ಎಂದು ಎಚ್ಚರಿಕೆ ನೀಡಿದರು.ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಆರ್.ರವೀಂದ್ರ ಮತ್ತು ಎಲ್ಲ ಗ್ರಾಪಂ ಪಿಡಿಒ ಅಧಿಕಾರಿಗಳು ಹಾಜರಿದ್ದರು.

ಪ್ರಗತಿ ಪರಿಶೀಲನಾ ಸಭೆಯಿಂದ ಗೇಟ್‍ಪಾಸ್ ನೀಡಿದ ಸಿಇಒ:
ಬಿ.ಬಿ.ಕಾವೇರಿರವರು ಪ್ರಗತಿ ಪರೀಶೀಲನೆ ಮಾಡುವಾಗ ತನ್ನ ಇತಿಮಿತಿಗಳನ್ನು ಮರೆತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೊಬೈಲ್‍ನಲ್ಲಿ ಮಾತನಾಡಿ ಆಶಿಸ್ತನ್ನು ಪ್ರದರ್ಶಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ ಆನಂದಚಾರ್‍ರವರ ಕಾರ್ಯವೈಖರಿಯನ್ನು ಗಮನಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಭೆಯಿಂದ ಹೊರಹಾಕಿದರು.

 

► Follow us on –  Facebook / Twitter  / Google+

Facebook Comments

Sri Raghav

Admin