ಗೋಯಾತ್ರೆ ರಥ ಗೋವಿನ ಕುರಿತು ಜಾಗರೂಕತೆ ಮೂಡಿಸಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

4

ರಾಯಬಾಗ,ಸೆ.30- ಶ್ರೀ ರಾಮಚಂದ್ರಾ ಪುರ ಮಠದ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಪ್ರಾರಂಭಿಸಿದ ಮಂಗಲಗೋಯಾತ್ರೆ ರಥವು ನಿನ್ನೆ ಪಟ್ಟಣಕ್ಕೆ ಆಗಮಿಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಾಟೀಲ ಚೌಕದಲ್ಲಿ ಕಾರ್ಯಕ್ರಮ ನಡೆಯಿತು.ಗೋಯಾತ್ರೆ ರಥದ ಜೊತೆ ಆಗಮಿಸಿದ್ದ ಶಿಶಿರ ಹೆಗಡೆ ಮಾತನಾಡಿ ದೇಶಿ ತಳಿಯ ಗೋವುಗಳ ಮಹತ್ವ ಹಾಗೂ ಅವುಗಳು ಉಳಿವಿಗಾಗಿ ಮಂಗಲ ಗೋಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನ.8ರಿಂದ ಜ. 26ರವರೆಗೆ 80ದಿನಗಳ ಕಾಲ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೆರಳ, ತಮಿಳುನಾಡು, ಗೋವಾ, ತೆಲಾಂಗಣ, ಹಾಗೂ ಅಂದ್ರಗಳಲ್ಲಿ ಗೋಯಾತ್ರೆ ರಥವು ಸಂಚರಿಸಿ ಗೋವಿನ ಕುರಿತು ಜನರಲ್ಲಿ ಹೊಸ ಜಾಗರೂಕತೆಯನ್ನು ಮೂಡಿಸಲಿದೆ ಎಂದರು.

ಜ. 26ರಂದು ಮಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದ್ದು ರಾಜ್ಯಾದ್ಯಾಂತದಿಂದ ಸಾವಿರಾರು ಮಠಾಧೀಶರು ಹಾಗೂ ಲಕ್ಷಾಂತರ ಗೋಪ್ರೇಮಿಗಳು ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಜನೇವರಿ 7ರಂದು ಬೆಳಗಾವಿ ಜಿಲ್ಲಾ ಮಟ್ಟದ ಗೋಮೇಳ ಕಾರ್ಯಕ್ರಮವನ್ನು ಸವದತ್ತಿ ಪಟ್ಟಣದಲ್ಲಿ ನಡೆಸಲಾಗುವುದು ಎಂದು ಹೇಳಿದರು.ಈ ಕಾರ್ಯಕ್ರಮಕ್ಕೆ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಆಗಮಿಸಲಿದ್ದು, ಜಿಲ್ಲೆಯ ಎಲ್ಲ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು. ಪ್ರತಿ ತಾಲೂಕಿನಲ್ಲಿ ಗೋ ರಕ್ಷಣೆಯ ಸಲುವಾಗಿ ಗೋ ಪರಿವಾರ ಸಂಘಟನೆ ಮಾಡಲಾಗು ವುದೆಂದು ಹೇಳಿದರು.

ಜಿಲ್ಲಾ ಕಿಸಾನ ಸಂಘದ ಕಾರ್ಯದರ್ಶಿ ಕಲ್ಲಪ್ಪ ಹಾರೂಗೇರಿ ಮಾತನಾಡಿ ಒಬ್ಬ ರೈತ ಒಂದು ದೇಶಿ ಗೋವು ಸಾಕುವುದರಿಂದ ಸಾಕಷ್ಟು ಲಾಭ ಪಡೆದು ಕೊಳ್ಳಬಹುದು ಈಗಾಗಲೇ 68 ದೇಶಿ ಗೋತಳಿಗಳು ಭೂಮಿಯಿಂದ ಮಾಯವಾಗಿವೆ. ಈಗ ಕೇವಲ 35ತಳಿಗಳು ಮಾತ್ರ ಭೂಮಿಯ ಮೇಲೆ ಉಳಿದಿವೆ. ಗೋ ಮೂತ್ರದಿಂದ ನೂರಾರು ಕಾಯಿಲೆಗಳನ್ನು ಗುಣಪಡಿಸ ಬಹುದು ಆದ್ದರಿಂದ ಪ್ರತಿಯೊಬ್ಬರು ದೇಶಿ ಗೋವುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು. ಗೋ ರಥದ ಜೋತೆ ಆಗಮಿಸಿದ್ದ ಶ್ರೀಧರ ಹೆಗಡೆ, ಲಕ್ಷ್ಮೇಶ ಭಟ್ಟ, ಶ್ರೀ ರಾಮ ಸಂಘಟನೆಯ ರಾಜ್ಯ ಪ್ರಮುಖರಾದ ಜಯದೀಪ ದೇಸಾಯಿ, ಸದಾನಂದ ಹಳಿಂಗಳೆ, ಗೋಪಾಲ ಕೋಚೇರಿ, ಡಾ. ಸದಾನಂದ ನಾಯಿಕ, ಸುರೇಶ ನಾಯಿಕ, ಶಿವಪುತ್ರ ಕೋಚೇರಿ, ನಾರಾಯಣ ಮೇತ್ರಿ, ಏಕನಾಥ ಮಾಚಕನೂರ, ಮಹೇಶ ಹೊಸಮನಿ, ವಿಧ್ಯಾದರ ಕುಲಗುಡೆ, ರಮೇಶ ತೇಲಿ, ಸಾವಂತ ನಾಯಿಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin