ಗೋರಕ್ಷಕರನ್ನು ನಿಯಂತ್ರಿಸದಿದ್ದರೆ ಹಿಂಸಾಚಾರ ಸಾಧ್ಯತೆ : 23 ನಿವೃತ್ತ ಐಎಎಸ್ ಅಧಿಕಾರಿಗಳ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Vasundara-Raje

ಜೈಪುರ, ಏ.25- ಮುಸ್ಲಿಂ ರೈತನೊಬ್ಬನನ್ನು ಹತ್ಯೆ ಮಾಡಿರುವ ಗೋರಕ್ಷಕನನ್ನು ಬಂಧಿಸುವಂತೆ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂದಿಯಾ ಅವರನ್ನು ಆಗ್ರಹಿಸಿರುವ 23 ಮಂದಿ ನಿವೃತ್ತ ಐಎಎಸ್/ಐಪಿಎಸ್ ಅಧಿಕಾರಿಗಳು, ಇವರನ್ನು ನಿಯಂತ್ರಿಸದಿದ್ದರೆ ಭಾರೀ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.   ಅಲ್ಮಾರ್‍ನಲ್ಲಿ ಏ.1ರಂದು ಹೈನುಗಾರಿಕೆ ನಡೆಸುತ್ತಿದ್ದ ಪೆಹ್ಲೂ ಖಾನ್ ಎಂಬ ರೈತನನ್ನು ಗೋರಕ್ಷಕರ ಗುಂಪೊಂದು  ಥಳಿಸಿ ಹತ್ಯೆ ಮಾಡಿದ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಇವರು, ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಪೊಲೀಸ್ ಮತ್ತು ಇತರ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ 1968ನೇ ಬ್ಯಾಚ್‍ನ ಐಎಎಸ್/ಐಪಿಎಸ್ ಅಧಿಕಾರಿಗಳಾಗಿದ್ದವರು ಆಗ್ರಹಿಸಿದ್ದಾರೆ.ಖಾನ್ ಮತ್ತು ಇತರರು ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಗುಂಪೊಂದು  ದಾಳಿ ಮಾಡಿತ್ತು. ಜಾನುವಾರು ಜಾತ್ರೆಯಲ್ಲಿ ಹೈನುಗಾರಿಕೆ ಉದ್ದೇಶಕ್ಕಾಗಿ ಹಸುಗಳನ್ನು ಖರೀದಿಸಿರುವ ಬಗ್ಗೆ ಇವರಲ್ಲಿ ಪ್ರಮಾಣಪತ್ರ ಇತ್ತು. ಆದಾಗ್ಯೂ ತಥಾಕಥಿತ ಗೋರಕ್ಷಕರು ಮಾರಕವಾಗಿ ಹಲ್ಲೆ ನಡೆಸಿ ಕೊಂದಿದ್ದಾರೆ. ಇವರ ಸ್ವಯಂಘೋಷಿತ ಸ್ವೇಚ್ಚಾಚಾರದ ವರ್ತನೆಗೆ ಕಡಿವಾಣ ಹಾಕಬೇಕೆಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin