ಗೋಲಿಬಾರ್ ಗೆ ಬಲಿಯಾದ ಉಮೇಶ್ ಸ್ವಗ್ರಾಮದಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಈ ಸುದ್ದಿಯನ್ನು ಶೇರ್ ಮಾಡಿ
Umesh-1
ಪತ್ನಿ ಜೊತೆ ಉಮೇಶ್

ಕುಣಿಗಲ್,ಸೆ.13- ಪೊಲೀಸ್ ಗೋಲಿಬಾರ್‍ನಲ್ಲಿ ಸಾವನ್ನಪ್ಪಿರುವ ಉಮೇಶ್ ಸ್ವಗ್ರಾಮ ಸಿಂಗೋನಳ್ಳಿಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.   ತಾಲ್ಲೂಕಿನ ಹುಲಿಯೂರು ದುರ್ಗ ಹೋಬಳಿಯ ಪುಟ್ಟ ಗ್ರಾಮವಾದ ಸಿಂಗೋನಳ್ಳಿ ಉಮೇಶ ಕಳೆದ ಮೂರು ವರ್ಷದ ಹಿಂದಷ್ಟೆ ಕಟ್ಟಿಗೇರಿ ಗ್ರಾಮದ ಕಲಾವತಿ ಎಂಬಾಕೆಯನ್ನು ವಿವಾಹವಾಗಿದ್ದರು. ಜೀವನೋಪಾಯಕ್ಕಾಗಿ ಬೆಂಗಳೂರಿನ ಜೆ.ಪಿ. ನಗರದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಉಮೇಶ್ ಕೆಲಸ ಮಾಡುತ್ತಿದ್ದ ರು. ಹೆಗ್ಗನಹಳ್ಳಿಯಲ್ಲಿ ಹೆಂಡತಿ ಕಲಾವತಿ, ಸಹೋದರ ಹನುಮಂತ ಹಾಗೂ ಒಂದು ವರ್ಷದ ಮಗುವಿನೊಂದಿಗೆ ವಾಸವಾಗಿದ್ದರು. ಜತೆಗೆ ಸ್ವಗ್ರಾಮ ಸಿಂಗೋನಳ್ಳಿಯಲ್ಲಿ ವಾಸವಿದ್ದ ತಂದೆ ಸಿದ್ದಪ್ಪ, ತಾಯಿ ತೋತಮ್ಮ ಅವರುಗಳ ನಿರ್ವಹಣೆ ಕೂಡ ಉಮೇಶನೇ ಆಧಾರವಾಗಿದ್ದ.
ಜೋಪಡಿಯ ಮನೆ, ಕಿತ್ತು ತಿನ್ನುವ ಬಡತನದ ಬೇಗೆ ಜೀವನ ನಡುವೆ ಕಳೆದ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ತಂದೆಯೂ ಮೂತ್ರ ಪೀಡಿತ ಸಮಸ್ಯೆಗೆ ಒಳಗಾಗಿದ್ದರಿಂದ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

Umesh-2
ಉಮೇಶ್ ಪೋಷಕರ ಆಕ್ರಂದನ

ಎಷ್ಟೇ ಕಷ್ಟವಾದರೂ ಸ್ವಾಭಿಮಾನಿ ಬದುಕು ಸಾಗಿಸುತ್ತಿದ ಉಮೇಶ, ಕನ್ನಡ ಸಂಘಟನೆ ಜತೆಗೂ ಗುರುತಿಸಿಕೊಂಡಿದ್ದ. ಸ್ನೇಹಜೀವಿಯಾಗಿದ್ದ ಈತ ನಿನ್ನೆ ಎಂದಿನಂತೆ ಕೆಸಲಕ್ಕೆ ಹೋಗಿ ವಾಪಸ್ಸು ಬರುವಾಗ ಪ್ರತಿಭಟನೆಗಳು ಶುರುವಾಗಿತ್ತು. ಮನೆ ಸಮೀಪವೇ ಕನ್ನಡ ಸಂಘಟನೆಗಳು ಧರಣಿ ನಡೆಸುವ ಸ್ಥಳಕ್ಕೆ ಹೋಗಿ ಕರ್ನಾಟಕ ಪರ ಜಯಘೋಷ ಕೂಗುತ್ತಿರುವ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡು ಉಮೇಶನ ಬೆನ್ನಿಗೆ ತಾಗಿ ಎದೆಯಿಂದ ಹೊರಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದ ಈತನನ್ನೂ ಜತೆಯಲ್ಲಿದ್ದವರು ಮತ್ತು ಪೊಲೀಸರು ತಕ್ಷಣ ಲಕ್ಷ್ಮೀ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 10.45ರಲ್ಲಿ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

Untitled-3
ಉಮೇಶ್ ಮನೆ

ಆಘಾತ:
ಗುಂಡೇಡು ಬಿದ್ದಿರುವ ಬಗ್ಗೆ ಕಲಾವತಿಯವರಿಗೆ ತಿಳುಯುತ್ತಿದ್ದಂತೆಯೇ ಆತಂಕದಿಂದ ಆಸ್ಪತ್ರೆಗೆ ದೌಡಾಯಿಸಿ ಪತಿಯನ್ನು ನೋಡುತ್ತಿದ್ದಂತೆಯೇ ಆಘಾತಗೊಂಡು ಕುಸಿದು ಬಿದ್ದರು.
ಒಂದು ವರ್ಷದ ಮಗುವಿನ ಆಳು ಜತೆಯಲ್ಲಿದ್ದ ಉಮೇಶನ ಸ್ನೇಹಿತರು ಹಾಗೂ ಸ್ಥಳೀಯರ ಕರುಳು ಕಿತ್ತು ಬರುವಂತಿತ್ತು. ಸಮಾಧಾನದ ಮಾತುಗಳು ಅಲ್ಲಿ ಯಾರಿಗೂ ಕೇಳಿಸದಂತಾಗಿತ್ತು.

ಗ್ರಾಮಸ್ಥರ ಆಕ್ರೋಶ:
ಪರಿಹಾರ ಸಿಗುವವರೆಗೂ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಗ್ರಾಮಕ್ಕೆ ಸಾಗಿಸುವ ಸಂದರ್ಭದಲ್ಲಿ ಕೆಲವರು ಪೊಲೀಸರ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

5ಲಕ್ಷ ರೂ. ಬದಲಿಗೆ 10 ಲಕ್ಷ ರೂ. ಪರಿಹಾರ ನೀಡಿ
ಕಾವೇರಿ ಹೋರಾಟದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಉಮೇಶ್ ಮನೆಗೆ ಭೇಟಿ ನೀಡಿದ ಶಾಸಕ ಡಿ. ನಾಗರಾಜಯ್ಯನವರು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ, ರಾಜ್ಯ ಸರ್ಕಾರ ಘೋಷಿಸಿರುವ 5ಲಕ್ಷ ರೂ. ಬದಲಿಗೆ 10 ಲಕ್ಷ ರೂ. ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.  ಮೃತ ಉಮೇಶನೇ ಕುಟುಂಬದ ಆಧಾರ ಸ್ತಂಭವಾಗಿದ್ದು, ಕಡು ಬಡತನದಲ್ಲಿರುವ ಅವರ ಕುಟುಂಬಕ್ಕೆ ನೀಡಲು ಘೋಷಿಸಿರುವ ಹಣ ಅತ್ಯಲ್ಪವಾಗಿದೆ. ಆದ್ದರಿಂದ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಟಿ.ದಾಶಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ.ನಾಗರಾಜಯ್ಯ ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿ 10 ಲಕ್ಷ ರೂ. ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ವೈಯಕ್ತಿಕವಾಗಿ ಪಕ್ಷದ ವತಿಯಿಂದ 5ಲಕ್ಷ ರೂ. ಪರಿಹಾರ ಘೋಷಿಸಿದರು.  1991ರಲ್ಲಿ ನಡೆದ ಕಾವೇರಿ ಘಟನೆ ಗೋಲಿಬಾರ್‍ನಲ್ಲೂ ಕೂಡ ನಮ್ಮದೇ ತಾಶಲ್ಲೂಕಿನ ಟಿ.ಹೊಸಳ್ಳಿ ಗ್ರಾಮದ ರಾಜು ಎಂಬುವವರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು. ಈ ಘಟನೆಯಲ್ಲೂ ಕೂಡ ನಮ್ಮ ತಾಲ್ಲೂಕಿನವರೇ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಶಾಸಕರು ವಿಷಾದ ವ್ಯಕ್ತ ಪಡಿಸಿದರು.
ಉಮೇಶ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಹಾಘೂ ಹೆಂಡತಿ ಕಲಾವತಿಗೆ ಉದ್ಯೋಗ ಕಲ್ಪಿಸಿಕೊಡುವಂತೆ ಒತ್ತಾಯಿಸಿ ರಾಜ್ಯ ಹೆದ್ದಾರಿ 33ರಲ್ಲಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಯಾವುದೇ ಕಾರಣಕ್ಕೂ ಶಾಂತಿ ಕದಡದೆ, ಸಾರ್ವಜನಿಕರ ಆಸ್ತಿ-ಪಾಸ್ತಿಗೆ ನಷ್ಟವಾಗದಂತೆ ಶಾಂತಿಯುತವಾಗಿ ಪ್ರತಿಭಟಿಸಿಬೇಕೆಂದು ಮನವಿ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ , ಸಿಪಿಐ ಬಾಳೇಗೌಡ, ಡಿವೈಎಸ್ಪಿ ಚಂದ್ರಶೇಖರ್ ಅವರುಗಳು ಶಾಂತಿ ಸ್ಥಾಪನೆಗೆ

► Follow us on –  Facebook / Twitter  / Google+

Facebook Comments

Sri Raghav

Admin