ಗೋಲ್‍ಮಾಲ್-4 ಪರಿಣಿತಿ ಕಾಮಿಡಿ

ಈ ಸುದ್ದಿಯನ್ನು ಶೇರ್ ಮಾಡಿ

chpra

ಗೋಲ್‍ಮಾಲ್-ಬಾಲಿವುಡ್‍ನ ಬ್ಲಾಕ್ ಬಸ್ಟರ್ ಸಿನಿಮಾ. ಈ ಹಿಂದೆ ತೆರೆಕಂಡ ಮೂರು ಸರಣಿಗಳೂ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡಿದ್ದವು. ಈಗ ಗೋಲ್‍ಮಾಲ್-4 ರಿಲೀಸ್‍ಗೆ ಮುಂಚೆಯೇ ಸಾಕಷ್ಟು ಸುದ್ದಿಯಾಗಿದೆ. ಈ ಚಿತ್ರದ ತಾರೆಯರಲ್ಲಿ ಒಬ್ಬರಾದ ಪರಿಣೀತಿ ಚೋಪ್ರಾ ಗೋಲ್‍ಮಾಲ್ ಕಾಮಿಡಿ ಕಮಾಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾಳೆ. ಗೋಲ್‍ಮಾಲ್-4ರಲ್ಲಿ ನಟಿಸಲು ಅವಕಾಶ ಲಭಿಸಿದ್ದು ಅದೃಷ್ಟ . ರೋಹಿತ್ ಶೆಟ್ಟಿ ಅವರಂಥ ಖ್ಯಾತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು ಒಂದು ಅದ್ಭುತ ಅನುಭವ. ನನಗೆ ಮತ್ತು ಪ್ರೇಕ್ಷಕರಿಗೆ ಈ ಸಿನಿಮಾ ತಾಜತನದ ಬದಲಾವಣೆ ನೀಡಲಿದೆ ಎನ್ನುತ್ತಾಳೆ ಮೋಹಕ ನಗೆಯ ಅಂದದ ಬೆಡಗಿ ಪರಿಣೀತಿ.

ಇಂಥ ಸಿನಿಮಾದಲ್ಲಿ ನಟಿಸಲು ಅವಕಾಶ ಲಭಿಸುತ್ತದೆ ಎಂದು ನಾನು ಭಾವಿಸಿರಲಿಲ್ಲ. ಎಲ್ಲ ರೀತಿಯ ಚಿತ್ರಗಳಲ್ಲೂ ನಟಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ರೋಹಿತ್ ಶೆಟ್ಟಿ ಜೊತೆ ಕೆಲಸ ಮಾಡುವುದು ನನಗೆ ಒಂದು ರೀತಿಯ ಗೌರವವಾಗಿದೆ. ಚಿತ್ರೀಕರಣದ ಶೂಟಿಂಗ್‍ನಲ್ಲಿ ತುಂಬಾ ತಮಾಷೆ ಇತ್ತು. ಮೇರಿ ಪ್ಯಾರಿ ಬಿಂದು ಚಿತ್ರದ ನಂತರ ಇದು ನನಗೆ ಮತ್ತು ಪ್ರೇಕ್ಷಕರಿಗೂ ಒಂದು ಉತ್ತಮ ಅನುಭವ ನೀಡಲಿದೆ ಎಂದು ಪರಿಣೀತಿ ತಿಳಿಸಿದ್ದಾಳೆ. ಗೋಲ್‍ಮಾಲ್‍ನಲ್ಲಿ ಅಜಯ್ ದೇವಗನ್, ಟಬು, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಕುನಾಲ್ ಕೀಮು ನಟಿಸಿದ್ದು, ಮೊದಲ ಷೆಡ್ಯೂಲ್ ಪೂರ್ಣಗೊಂಡಿದ್ದು, ಹೈದರಾಬಾದ್‍ನಲ್ಲಿ ಮುಂದಿನ ಚಿತ್ರೀಕರಣ ನಡೆಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin