ಗೋವಾದಲ್ಲಿ ಅದ್ದೂರಿಯಾಗಿ ನಡೀತು ಯಶ್- ರಾಧಿಕಾ ಎಂಗೇಜ್ಮೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

Yash-radhika

ಬೆಂಗಳೂರು,ಆ.12– ಮೊಗ್ಗಿನ ಮನಸಿನ ಚೆಲುವೆ ರಾಧಿಕಾ ಪಂಡಿತ್ ಹಾಗೂ ರಾಜಾಹುಲಿ ಖ್ಯಾತಿಯ ನಾಯಕ ನಟ ಯಶ್  ಅವರ ವಿವಾಹ ನಿಶ್ಚಿತಾರ್ಥ ಗೋವಾದ ವಿವಾಂತ್ ಹೊಟೇಲ್‍ನಲ್ಲಿ ಇಂದು ಅದ್ಧೂರಿಯಾಗಿ ನೆರವೇರಿತು.  ಗೋಕರ್ಣ ಮೂಲದ ಪುರೋಹಿತ್ ರವಿಶಂಕರ್ ನೇತೃತ್ವದಲ್ಲಿ ಇಂದು ಸಿಂಡ್ರಲಾ ರಾಧಿಕಾ ಪಂಡಿತ್ ಹಾಗೂ ರಾಮಾಚಾರಿ ಯಶ್ ಅವರು ಉಂಗುರ ಬದಲಾಯಿಸಿಕೊಂಡರು.  ಇದಕ್ಕೆ ಇಡೀ ಸ್ಯಾಂಡಲ್‍ವುಡ್ ಸಾಕ್ಷಿಯಾಯಿತು. ಕಪ್ಪು ಕುರ್ತಾದಲ್ಲಿ ಯಶ್ ಮಿಂಚಿದರೆ, ನೀಲಿ ಸಿಂಡ್ರಲಾ ಡ್ರಸ್‍ನಲ್ಲಿ ರಾಧಿಕಾ ಪಂಡಿತ್ ಕಂಗೊಳಿಸುತ್ತಿದ್ದರು.

ವಿವಾಂತ್ ಹೊಟೇಲ್‍ನಲ್ಲಿ 4 ಲಕ್ಷ ಬಿಳಿ ಬಣ್ಣದ ಗುಲಾಬಿಗಳಿಂದ ನಿಶ್ಚಿತಾರ್ಥದ ವೇದಿಕೆ ಸಿದ್ಧಗೊಳಿಸಲಾಗಿತ್ತು. ನಿಶ್ಚಿತಾರ್ಥದ ಡ್ರಸ್‍ನಲ್ಲಿ ಸಿಂಗಾರಗೊಂಡ ರಾಧಿಕಾ ಪಂಡಿತ್ ಮತ್ತು ಯಶ್ ವೇದಿಕೆಯತ್ತ ಬರುತ್ತಿದ್ದಂತೆ ಚಲನಚಿತ್ರ ಗಣ್ಯರು, ಅಭಿಮಾನಿಗಳು ಅವರತ್ತ ಕೈ ಬೀಸಿ ತಮ್ಮ ಆನಂದ ವ್ಯಕ್ತಪಡಿಸಿದರು.

Yash-MarriAFGE

Yash-3

Yash-4

ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ ಎಂಗೇಜ್‍ಮೆಂಟ್‍ಗೆ ರವಿಚಂದ್ರನ್,  ಹಿರಿಯ ನಟ, ಮಾಜಿ ಸಚಿವ ಅಂಬರೀಶ್, ರಾಕ್‍ಲೈನ್ ವೆಂಕಟೇಶ್, ಪುನೀತ್ ರಾಜ್‍ಕುಮಾರ್, ಚಲನಚಿತ್ರ ನಟ-ನಟಿಯರು, ದಿಗ್ಗಜರು, ನಿರ್ಮಾಪಕರು, ನಿರ್ದೇಶಕರು, ವಿತರಕರು ಇಡೀ ತಾರಾಬಳಗವೇ ಅಲ್ಲಿ ನೆರೆದಿತ್ತು. ಅಲ್ಲದೆ, ಯಶ್ ಅವರ ಬಾಲ್ಯ ಸ್ನೇಹಿತರು ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು.  ಮಂಡ್ಯದ ಹುಡುಗ, ಭಟ್ಕಳ ಮೂಲದ ಹುಡುಗಿ ಗೋವಾದಲ್ಲಿ ನಿಶ್ಚಿತಾರ್ಥ ಏಕೆ ನಡೆಯುತ್ತಿದೆ ಎಂಬ ಆಶ್ಚರ್ಯ ಎಲ್ಲರಿಗೂ ಕಾಡುತ್ತಿತ್ತು. ಆದರೆ, ರಾಧಿಕಾ ಪಂಡಿತ್ ಅವರ ಅಜ್ಜಿ ಮನೆ ಗೋವಾದಲ್ಲಿದೆ. ಹಾಗಾಗಿ ಗೋವಾದಲ್ಲಿ ವಿವಾಹ ನಿಶ್ಚಿತಾರ್ಥ ನೆರವೇರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin