ಗೋವಾದ ಮನೋಹರ್ ಪರಿಕ್ಕರ್ ಸರ್ಕಾರಕ್ಕೆ ಆಪತ್ತು

ಈ ಸುದ್ದಿಯನ್ನು ಶೇರ್ ಮಾಡಿ

Manohar-Parikkar-01

ಬೆಳಗಾವಿ,ಡಿ.27- ಮಹದಾಯಿ ವಿವಾದ ಇತ್ಯರ್ಥ ಪಡಿಸುವಂತೆ ರೈತರು ಬೆಂಗಳೂರಿನಲ್ಲಿ ಉಗ್ರ ಹೋರಾಟ ಮುಂದುವರೆಸಿದ್ದರೇ ಮತ್ತೊಂದೆಡೆ 7.56 ಟಿಎಂಸಿ ನೀರು ಕುಡಿಯಲು ನೀಡುವ ಬಗ್ಗೆ ಚಿಂತನೆ ನಡೆಸುವುದಾಗಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರ ಗೋವಾದಲ್ಲಿ ರಾಜಕೀಯ ಕಿಚ್ಚು ಹೊತ್ತಿಸಿದೆ. ಗೋವಾ ಸಿಎಂ ಮನೋಹರ್ ಪರಿಕ್ಕರ್ ಮಹದಾಯಿ ವಿಚಾರದಲ್ಲಿ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಗೋವಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ನಿರ್ಮಾಣವಾಗಿದೆ. ಈಗಾಗಲೇ ಗೋವಾ ಸರ್ಕಾರದ ವಿರುದ್ಧ ಎಲ್ಲಾ ಮಿತ್ರ ಪಕ್ಷಗಳಾದ ಮಹಾರಾಷ್ಟ್ರವಾದಿ ಗೋಮಾತ ಪಕ್ಷ ಹಾಗೂ ಗೋವಾ ಫಾರ್ವಡ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದು, ಅತ್ತ ಗೋವಾ ಸುರಕ್ಷಾ ಮಂಚ್ ಮತ್ತು ಮಹದಾಯಿ ಬಚಾವೋ ಸಮಿತಿ ಸಂಘಟನೆಗಳೂ ಸಿಎಂ ನಿರ್ಧಾರ ಮುಂದಿಟ್ಟುಕೊಂಡು ಮನೆ-ಮನೆಗೆ ಹೋಗಿ ಪ್ರಚಾರ ಮಾಡುವ ಮೂಲಕ ಜನಾಂದೋಲನ ರೂಪಿಸಲು ಮುಂದಾಗಿವೆ.

ಈ ಮಧ್ಯೆ ಗೋವಾದಲ್ಲಿ ಜ. 6 ರಂದು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆ ಗಳು ಸಭೆ ಸೇರಲು ನಿರ್ಧರಿಸಿವೆ. ಈ ಮಧ್ಯೆ ಗೋವಾದಲ್ಲಿ 40 ವಿಧಾನಸಭೆ ಬಲಾಬಲ ಸ್ಥಾನವಿದ್ದು, ಬಿಜೆಪಿ 14, ಮಹಾರಾಷ್ಟ್ರವಾದಿ ಗೋಮಾಂತ್ರ ಪಕ್ಷದ 3 ಹಾಗೂ ಗೋವಾ ಫಾರ್ವಡ್ ಪಕ್ಷದ 3, ಮೂರು ಪಕ್ಷೇತರ, ಎನ್‍ಸಿಪಿ 1. ಕಾಂಗ್ರೆಸ್ 16 ಸ್ಥಾನಗಳನ್ನು ಹೊಂದಿವೆ. ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಮಿತ್ರಪಕ್ಷಗಳೊಂದಿಗೆ ಸರ್ಕಾರ ರಚಿಸಿದೆ. ಆದರೆ ಮಹದಾಯಿ ಕಿಚ್ಚು ಉಲ್ಭಣ ಗೊಂಡರೆ ಗೋವಾದಲ್ಲಿ ಬಿಜೆಪಿ ಸರ್ಕಾರ ಪತನವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಅಂದು ನಡೆಯುವ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಸಭೆಯಲ್ಲಿ ಗೋವಾ ಸರ್ಕಾರ ಯಾವ ನಿಲುವು ಪ್ರದರ್ಶಿಸಲಿದೆ ಎಂಬುದರ ಮೇಲೆ ಗೋವಾ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿದೆ.

Facebook Comments

Sri Raghav

Admin