ಗೋವಾ ಬೀಚ್ ಪಾರ್ಟಿಯಲ್ಲಿ ಶಾಕ್ ಕೊಟ್ಟ ಮಲೈಕಾ ‘ಖಾನ್’
ಬಾಲಿವುಡ್ನಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಪ್ರಹಸನವೊಂದು ಸಾಕ್ಷಿಯಾಗಿದೆ. ಸೂಪರ್ಸ್ಟಾರ್ ಸಲ್ಮಾನ್ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಮಾದಕ ನಟಿ ಮಲೈಕಾ ಅರೋರಾ ವಿಚ್ಚೇದಿತರಾಗಿದ್ದರೂ ಗೋವಾ ಬೀಚ್ನ ಪಾರ್ಟಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಗೊಂದಲ ಮತ್ತು ಅಚ್ಚರಿಗೆ ಕಾರಣವಾಗಿದೆ. ಕಳೆದ ವರ್ಷ ಜನವರಿಯಲ್ಲಿ ಅರ್ಬಾನ್ನಿಂದ ಡೈವೋರ್ಸ್ ಕೋರಿ ಮಲೈಕಾ ಕೋರ್ಟ್ ಮೆಟ್ಟಿಲೇರಿದ್ದಳು. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ಇವರನ್ನು ಕರೆಸಿ ಆಪ್ತ ಸಮಾಲೋಚನೆ ನಡೆಸಲಾಗಿತ್ತು. ಆಗಿನಿಂದ ಇವರಿಬ್ಬರ ಪರಸ್ಪರ ಭೇಟಿಯಾಗಿಲ್ಲ. ಈ ಮಧ್ಯೆ, ಉದಯೋನ್ಮುಖ ನಟ ಅರ್ಜುನ್ ಕಪೂರ್ ತಡರಾತ್ರಿ ಮಲೈಕಾ ಮನೆಗೆ ಹೋಗಿ ಬರುತ್ತಿದ್ದ ಸುದ್ದಿ ಗುಟ್ಟಾಗಿ ಉಳಿಯಲಿಲ್ಲ.
ಇದಾದ ನಂತರ ಖಾನ್ ಮತು ಮಲೈಕಾ ಸಂಬಂಧ ಮತ್ತಷ್ಟು ಹಳಸಿತ್ತು. ಆದರೆ ಈಗ ಗೋವಾದ ಕಡಲಕಿನಾರೆಯಲ್ಲಿ ಮಾಜಿ ದಂಪತಿ ಮಸ್ಸ್ ಪಾರ್ಟಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಇವರಿಬ್ಬರು ಜೊತೆಯಾಗಿರುವ ಫೋಟೊಗಳನ್ನು ಮಲೈಕಾ ಸಹೋದರಿ ಅಮೃತಾ ಅರೋರಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಕ್ಯಾಮೆರಾಗೆ ಇವರಿಬ್ಬರು ನಗುತ್ತಾ ಕ್ಯಾಮೆರಾಗೆ ಪೋಸು ನೀಡಿದ್ದಾರೆ. ಈ ಪಾರ್ಟಿಯಲ್ಲಿ ಚಿತ್ರನಟ ಚಿಂಕಿ ಪಾಂಡೆ, ಆತನ ಪತ್ನಿ ಭಾವನಾ ಪಾಂಡೆ, ಮಲೈಕಾ ಕುಟುಂಬದ ಸದಸ್ಯರು ಮತ್ತು ಬಂಧು-ಮಿತ್ರರು ಪಾಲ್ಗೊಂಡಿದ್ದರು.
Eesanje News 24/7 ನ್ಯೂಸ್ ಆ್ಯಪ್ – Click Here to Download