ಗೋವಾ ಮೊದಲ ಮಹಿಳಾ ಏಕೈಕ ಸಿಎಂ ಶಶಿಕಲಾ ಕಕೋಡ್ಕರ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Shashikala-Kakodkar

ಪಣಜಿ,ಅ.29- ಗೋವಾದ ಮೊದಲ ಮಹಿಳಾ ಮುಖ್ಯಮಂತ್ರಿ ಖ್ಯಾತಿಯ ಶಶಿಕಲಾ ಕಕೋಡ್ಕರ್ ಅವರು ತಡರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು, ದೀರ್ಘ ಕಾಲದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಶಶಿಕಲಾ ಅವರು ಗೋವಾದ ಮೊದಲ ಸಿಎಂ ದಯಾನಂದ್ ಅವರ ಪುತ್ರಿ. ದಯಾನಂದ್ ಅವರ ನಿಧನದ ನಂತರ 1973ರಲ್ಲಿ ಗೋವಾದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಶಶಿಕಲಾ ಅಧಿಕಾರ ವಹಿಸಿಕೊಂಡಿದ್ದರು. 1979ರ ಏಪ್ರಿಲ್‍ವರೆಗೂ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.  ಶಶಿಕಲಾ ಕಕೋಡ್ಕರ್ ಅವರ ನಿಧನಕ್ಕೆ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಹಾಗೂ ಮತ್ತಿತರ ರಾಜಕೀಯ ಮುಖಂಡರು ಸಂಪಾತ ಸೂಚಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin