ಗೋವಾ ಸಿಎಂ ಜತೆ ಪುಟ್ಟಣ್ಣಯ್ಯ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Puttanna

ಬೆಳಗಾವಿ, ಆ.31-ಮಹದಾಯಿ ಅಂತಿಮ ತೀರ್ಪು ಯಾರ ಪರವಾಗೇ ಬರಲಿ ಆ ಬಗ್ಗೆ ಏನಾದರೂ ತೊಂದರೆ ಇದ್ದಲ್ಲಿ ಕುಳಿತು ಚರ್ಚಿಸೋಣ ಎಂದು ಗೋವಾ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಇಂದಿಲ್ಲಿ ತಿಳಿಸಿದರು. ಕಳಸಾ-ಬಂಡೂರಿ ವಿವಾದ ವಿಚಾರ ಕುರಿತಂತೆ ಗೋವಾ ಮುಖ್ಯಮಂತ್ರಿಗಳನ್ನು ಪುಟ್ಟಣ್ಣಯ್ಯ ನೇತೃತ್ವದ ತಂಡ ಭೇಟಿ ಮಾಡಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ರಾಜ್ಯದಲ್ಲಿ ನೀರಾವರಿ ಸಮಸ್ಯೆ ಉಲ್ಬಣಗೊಂಡಿದೆ. ತಮಿಳುನಾಡಿಗೆ ಈಗಾಗಲೇ 35 ಟಿಎಂಸಿ ನೀರು ಹೋಗಿದೆ. ಸಂಕಷ್ಟದ ದಿನಗಳಲ್ಲೂ ಪ್ರತಿದಿನ ಅರ್ಧ ಟಿಎಂಸಿ ನೀರು ಹರಿಯುತ್ತಿದೆ. ಈ ನಡುವೆ ಮಹದಾಯಿ ಮಧ್ಯಂತರ ತೀರ್ಪಿನಿಂದ ರಾಜ್ಯಾದ್ಯಂತ ಜನ ಕಂಗಾಲಾಗಿದ್ದಾರೆ. ಅದರಲ್ಲೂ ಈ ಭಾಗದ ಜನ ನೀರಿಲ್ಲದೆ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ ಎಂದರು.

ಇನ್ನು ಆರು ತಿಂಗಳಲ್ಲಿ ಗೋವಾದಲ್ಲಿ ಚುನಾವಣೆ ಇರುವುದರಿಂದ ಈಗ ಏನೂ ಮಾತನಾಡಲಾರೆವು. ಇದು ಸೂಕ್ಷ್ಮವಾದ ವಿಚಾರ. ಮಹದಾಯಿ ಮಧ್ಯಂತರ ತೀರ್ಪು ಮಾತ್ರ ಬಂದಿದೆ. ಅಂತಿಮ ತೀರ್ಪು ನಮ್ಮ ಅಥವಾ ನಿಮ್ಮ ಪರವಾಗಿ ಬಂದರೂ ತೊಂದರೆ ಏನಾದರೂ ಎದುರಾದರೆ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin