ಗೌರಿಬಿದನೂರು ಎಪಿಎಂಸಿ ಅಧ್ಯಕ್ಷ ಬೊಮ್ಮಣ್ಣ-ಉಪಾಧ್ಯಕ್ಷ ಮಲ್ಲಿಕಾರ್ಜುನಪ್ಪ ಅವಿರೋಧ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Gowribidanuru4

ಗೌರಿಬಿದನೂರು, ಫೆ.4-ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಬೊಮ್ಮಣ್ಣ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನಪ್ಪ ರವರುಗಳು ಅವಿರೋಧವಾಗಿ ಆಯ್ಕೆಯಾದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ(ಎಪಿಎಂಸಿ) 14 ಸ್ಥಾನಗಳನ್ನು ಹೊಂದಿದ್ದು, 11 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಗಳಿಸಿದ್ದರು.(ಇದರಲ್ಲಿ 2 ಅವಿರೋಧ ಆಯ್ಕೆ) 3 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದರು(ಇದರಲ್ಲಿ ಒಂದು ಅವಿರೋಧ ಆಯ್ಕೆ)ಬೇರೆಯಾರೂ ನಾಮಪತ್ರವನ್ನು ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಬೊಮ್ಮಣ್ಣ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಎಂ.ನಾಗರಾಜ ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರನ್ನು ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಅಭಿನಂದಿಸಿ ರೈತ ಪರ ಕೆಲಸ ಮಾಡುವಂತೆ ಮನವಿ ಮಾಡಿದರು.ತಾ.ಪಂ. ಅಧ್ಯಕ್ಷ ನಾರಪ್ಪರೆಡ್ಡಿ , ಉಪಾಧ್ಯಕ್ಷ ರತ್ನಮ್ಮಅಶ್ವತ್ಥಪ್ಪ, ಜಿ.ಪಂ. ಸದಸ್ಯ ಹೆಚ್.ವಿ.ಮಂಜುನಾಥ್, ಡಿ,ನರಸಿಂಹಮೂರ್ತಿ, ಎಪಿಎಂಸಿ ಸದಸ್ಯರಾದ ಮರಳೂರುಹನುಮಂತರೆಡ್ಡಿ, ಶ್ರೀಧರ್,ಶುಶೀಲಮ್ಮ, ಎಂ.ಆರ್.ಲಕ್ಷ್ಮೀನಾರಾಯಣ, ಅಶ್ವತ್ಥನಾರಾಯಣರೆಡ್ಡಿ, ನಾಗರತ್ನಮ್ಮ, ಪಿ.ಎನ್.ಶಿವಶಂಕರ್, ಎಂ.ಎ.ನಾಗರಾಜು, ಕೆ.ರಾಧಾಕೃಷ್ಣಯ್ಯಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ಲಾ ,ಯುವಕಾಂಗ್ರೆಸ್ ಅಧ್ಯಕ್ಷ ವೇದಲವೇಣಿವೇಣು, ಮುಖಂಡರಾದ ಜೆ.ಕಾಂತರಾಜು, ಹೆಚ್.ಎನ್.ಪ್ರಕಾಶ್ ರೆಡ್ಡಿ. ಕೇಶವರೆಡ್ಡಿ, ರಾಘವೇಂದ್ರ ಹನುಮಾನ್, ಮುಂತಾದವರು ಈ ಸಂದರ್ಬದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin