ಗೌರಿಬಿದನೂರು ತಾಲೂಕು ಕಚೇರಿ ಆವರಣದಲ್ಲಿ ಶಾರ್ಟ್ ಸಕ್ರ್ಯೂಟ್ : ತಪ್ಪಿದ ಭಾರೀ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

short-circute

ಗೌರಿಬಿದನೂರು, ಏ.26- ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.ತಾಲೂಕು ಕಚೇರಿ ಆವರಣದಲ್ಲಿನ ತಾಲೂಕು ಖಜಾನೆ  ಕೊಠಡಿ ಹೊರಗಡೆ ವಿದ್ಯುತ್ ವಯರ್‍ಗಳ ಸಂಪರ್ಕ ಹಾದುಹೋಗಿದ್ದ ಸ್ಥಳದಲ್ಲಿ ಆಕಸ್ಮಿಕವಾಗಿ ಶಾರ್ಟ್ ಸಕ್ರ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಚೇರಿ ಸಿಬ್ಬಂದಿಗಳು ಅಗ್ನಿ ಶಾಮಕ ದಳಕ್ಕೆ ವಿಷಯವನ್ನು ತಿಳಿಸಿ ಮುಂದಾಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.ತಾಲೂಕು ಖಜಾನೆ ಯ ಕೊಠಡಿ ಹೊರಗಡೆ ವಿದ್ಯುತ್ ವಯರ್‍ಗಳು ಹಳೆಯದಾಗಿದ್ದರಿಂದ ಶಾರ್ಟ್ ಸಕ್ರ್ಯೂಟ್ ಸಂಭವಿಸಿದೆ. ಆದರೆ, ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಕಚೇರಿಯ ಸುತ್ತಲೂ ವ್ಯವಸ್ಥಿತವಾಗಿ ಹೊಸದಾಗಿ ವೈರಿಂಗ್ ಮಾಡಲಾಗುತ್ತಿದೆ ಎಂದು ಎಂ.ನಾಗರಾಜ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin