ಗೌರಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಪರವಾನಿಗೆ ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Beluru Ganesh-Gowri-Festival

ಬೇಲೂರು, ಆ.26- ಗೌರಿ ಗಣೇಶ ಚತುರ್ಥಿ ಹಬ್ಬದಂದು ಗೌರಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡುವುದಕ್ಕಿಂತ ಮೊದಲು ಸಂಬಂಧಿಸಿದ ಇಲಾಖೆಗಳ ಪರವಾನಿಗೆ ಪಡೆಯಬೇಕು ಹಾಗು ರೌಡಿ ಶೀಟರ್‍ಗಳು ಸಮಿತಿಯಲ್ಲಿದ್ದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಲೋಕೇಶ್ ಹೇಳಿದರು.ಪಟ್ಟಣದ ನೆಹರುನಗರದಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡುವುದಕ್ಕಿಂತ ಮೊದಲು ಸಮಿತಿಗಳವರು ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ, ಪುರಸಭೆ, ಚೆಸ್ಕಾಂ ಇಲಾಖೆ, ಆಗ್ನಿ ಶಾಮಕ ದಳ ಹಾಗೂ ಪೊಲೀಸ್ ಇಲಾಖೆಯಿಂದ ಖಡ್ಡಾಯವಾಗಿ ಪರವಾನಿಗೆ ಪಡೆಯಬೇಕು ಎಂದರು.
ಒಂದು ವೇಳೆ ಮೂರ್ತಿ ವಿರೂಪ ಮತ್ತು ಇನ್ನಿತರ ಗಲಾಟೆಗಳು ನಡೆದಲ್ಲಿ ನೇರವಾಗಿ ಆಯೋಜಕರ ವಿರುದ್ದ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ. ರಾತ್ರಿ 10 ಗಂಟೆಯ ತನಕ ಮಾತ್ರ ಧ್ವನಿವರ್ಧಕಕ್ಕೆ ಪರವಾನಿಗೆ ನೀಡಲಾಗುತ್ತದೆ. ಗಣೇಶ ವಿಗ್ರಹದ ಆಯೋಜಕರು ಹೆಚ್ಚು ಧಾರ್ಮಿಕ ಮನೋಭಾವನೆಯಿಂದ ಕೂಡಿದ ಕಾರ್ಯಕ್ರಮಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂಬ ನಿಯಮಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯದ ಆದೇಶವಿರುವುದರಿಂದ ಕಡ್ಡಾಯವಾಗಿ ಪ್ರತಿಯೊಬ್ಬರು ಕಾನೂನನ್ನು ಪಾಲಿಸಬೇಕು ಎಂದು ತಿಳಿಸಿದರು.
ಪಿಎಸ್‍ಐ ಸುರೇಶ್ ಮಾತನಾಡಿ, ಗಣೇಶ ಪ್ರತಿಷ್ಟಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಮದ್ಯಪಾನ ಮತ್ತು ಬಣ್ಣ ಎರಚುವುದನ್ನು ಕಡ್ಡಾಯವಾಗಿ ನಿಷೇದ ಮಾಡಲಾಗಿದೆ ಎಂದು ತಿಳಿಸಿದರು.ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಅರುಣಕುಮಾರ್, ಪೇಟೆ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳಾದ ಉಮೇಶ್ ಪ್ರಸನ್ನ, ಕೋಟೆ ಗಣಪತಿ ಸೇವಾ ಸಮಿತಿ ಮೋಹನ್‍ಕುಮಾರ್ ಗಿರೀಶ್ ಇನ್ನಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin