ಗೌರಿ ಲಂಕೇಶ್ ಕುರಿತು ಅವಹೇಳನಕಾರಿ ಟ್ವೀಟ್ ಮಾಡಿದ್ದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Gauru-Lankesh-Dead

ಬೆಂಗಳೂರು, ಸೆ.6- ಕಳೆದ ರಾತ್ರಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದ ನಂತರದಲ್ಲಿ ಅಂತರ್ಜಾಲದ ಮೂಲಕ ಸಂಭ್ರಮ ವ್ಯಕ್ತಪಡಿಸಿ ಅಶ್ಲೀಲ ಹಾಗೂ ಅಮಾನವೀಯ ಸಂದೇಶಗಳು, ಟ್ವೀಟ್‍ಗಳನ್ನು ಫೇಸ್‍ಬುಕ್‍ಗಳಲ್ಲಿ ಹರಿಬಿಡುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಂತಹ ದುಷ್ಕರ್ಮಿಗಳ ಬೆನ್ನು ಬಿದ್ದಿದ್ದಾರೆ.

ಈಗಾಗಲೇ ಚಿಕ್ಕಮಗಳೂರಿಗೆ ದೌಡಾಯಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು ಚಿಕ್ಕಮಗಳೂರಿನಲ್ಲಿ ಈ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಿದ್ದಾರೆ. ಬೆಂಗಳೂರು ನಗರದಲ್ಲೂ ಒಬ್ಬನನ್ನು ಬಂಧಿಸಿದ್ದು, ಅವರ ಆಮೂಲಾಗ್ರ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಕೂಡ ವಿವಿಧೆಡೆಗಳಲ್ಲಿ ಇಂತಹ ದುಷ್ಕರ್ಮಿಗಳ ಪತ್ತೆಗಾಗಿ ವ್ಯಾಪಕ ಶೋಧಕಾರ್ಯ ನಡೆಸುತ್ತಿರುವ ಪೊಲೀಸರು ಸದ್ಯದಲ್ಲೇ ಇನ್ನೂ ಕೆಲವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Facebook Comments

Sri Raghav

Admin