ಗ್ರಾಮಗಳ ವಿಕಾಸದಿಂದ ದೇಶದ ಅಭಿವೃದ್ಧಿ ಸಾಧ್ಯ

ಈ ಸುದ್ದಿಯನ್ನು ಶೇರ್ ಮಾಡಿ

00000-

ಗದಗ,ಸೆ.27- ಗ್ರಾಮಗಳು ಅಬಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ತಾಲೂಕಿನ ನಾಗಾವಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಣೇಶ ಲಮಾಣಿ ಹೇಳಿದರು.ತಾಲೂಕಿನ ನಾಗಾವಿ ಗ್ರಾಮದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ರಾಮವಿಕಾಸ ಯೋಜನೆಯಡಿ ನಿನ್ನೆ ರಸ್ತೆ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಉತ್ತಮ ಪರಿಸರ ನಿರ್ಮಾಣ, ಗ್ರಾಮಗಳಿಂದ ಜನರು ವಲಸೆ ಹೋಗಬಾರದೆನ್ನುವ ಉದ್ಧೇಶದಿಂದ ನಗರದಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನೂ ಗ್ರಾಮೀಣ ಜನರಿಗೆ ದೊರಕುವಂತೆ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಗ್ರಾಮಸ್ಥರು ಪರಸ್ಪರ ಸಹಕಾರ ಮನೋಭಾವನೆಯೊಂದಿಗೆ ಅಭಿವೃದ್ಧಿ ಗ್ರಾಮ ಪಂಚಾಯತಿ ಕೈಗೊಳ್ಳುವ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.

ಗ್ರಾಮ ವಿಕಾಸ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಗ್ರಾಮ ಪಂಚಾಯತಿ ಸದಸ್ಯ ಜಗದೀಶ ಚಿಂಚಲಿ ಮಾತನಾಡಿ, ಆರೋಗ್ಯವಂತ ಯುವಪಡೆ ದೇಶದ ಆಸ್ತಿಯಾಗಿದ್ದು, ಗ್ರಾಮೀಣ ಭಾಗದ ಯುವ ಜನಾಂಗ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸರ್ಕಾರ ಗ್ರಾಮ ವಿಕಾಸ ಯೋಜನೆಯಡಿ ವ್ಯಾಯಾಮ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಯುವಕರು ಇದರ ಸದುಪಯೋಗಪಡೆಯಬೇಕು ಎಂದು ಹೇಳಿದರು.ಗ್ರಾಪಂ ಸದಸ್ಯ ಯಶವಂತ ಮರಡ್ಡಿ, ಮುಖಂಡರಾದ ಶಂಕ್ರಪ್ಪ ಚಿಂಚಲಿ, ಚನ್ನಬಸಪ್ಪ ಮಡಿವಾಳರ, ಯಲ್ಲಪ್ಪ ಹಡಗಲಿ, ಮುತ್ತಪ್ಪ ಮಲ್ಲಮ್ಮನವರ, ತಾಲೂಕ ಪಂಚಾಯತಿ ಸದಸ್ಯ ಎಂ.ಎಂ. ತಾಮ್ರಗುಂಡಿ, ಗ್ರಾಪಂ ಉಪಾಧ್ಯಕ್ಷೆ ಸಕ್ಕೂಬಾಯಿ ಚವ್ಹಾಣ, ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಚವ್ಹಾಣ, ಮಂಜವ್ವ ಅಸುಂಡಿ, ಸುಲೇಮಾನಸಾಬ ನದಾಫ್, ಭೂಸೇನಾ ನಿಗಮದ ಕಿರಿಯ ಅಭಿಯಂತರ ಆರ್.ಎಸ್.ಮಾಳೋದಕರ, ಪಂಚಾಯತಿ ಸಿಬ್ಬಂದಿ ಮಲ್ಲಪ್ಪ ಹೊಂಬಳ ಮುತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin