ಗ್ರಾಮಸ್ಥರೇ ನಿರ್ಮಿಸಿದ ಹಾಲಿನ ಡೈರಿ

ಈ ಸುದ್ದಿಯನ್ನು ಶೇರ್ ಮಾಡಿ

sulibele--milk

ಸೂಲಿಬೆಲೆ, ಆ.9-ಸತತವಾಗಿ 35 ವರ್ಷಗಳಿಂದ ಪಕ್ಕದ ಗ್ರಾಮಕ್ಕೆ ಹಾಲು ಸರಬರಾಜು ಮಾಡುತ್ತಿದ್ದ ಸೊಣ್ಣಬೈಚನಹಳ್ಳಿ ಗ್ರಾಮಸ್ಥರ ಪರದಾಟ ತಪ್ಪಿದ್ದು ಗ್ರಾಮಸ್ಥರೇ ತಮ್ಮ ಸ್ವಂತ ಹಣದಿಂದ ಹಾಲು ಡೈರಿ ಉದ್ಘಾಟಿಸಿರುವುದು ಸಂತಸದ ಸಂಗತಿ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದಲಿಪ್ಲ ನೂತನ ಹಾಲು ಡೈರಿ ಉದ್ಘಾಟಿಸಿ ಮಾತನಾಡಿದ ಅವರು, ಹೊಸಕೋಟೆ ತಾಲ್ಲೂಕಿನಲ್ಲೇ ಇದೊಂದು ಇತಿಹಾಸವಾಗಿದ್ದು, ಇತರೆ ಗ್ರಾಮಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಅನುದಾನದಲ್ಲಿ ಡೈರಿ ನಿರ್ಮಾಣ ಮಾಡಿಸಬೇಕಿತ್ತು. ಆದರೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಸಾಧ್ಯವಾಗಲಿಲ್ಲ. ಆದರೆ ಗ್ರಾಮಸ್ಥರೆ ಸ್ವಂತ ಹಣದಲ್ಲಿ ಡೈರಿ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಮಾಜಿ ಜಿ.ಪಂ. ಸದಸ್ಯ ಬಿ.ಎಂ.ನಾರಾಯಣಸ್ವಾಮಿ. ಡೈರಿ ಅದ್ಯಕ್ಷ ಎನ್,ಬಸಯ್ಯ, ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರ್, ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ರಾಘವನ್, ಸಹಾಯಕ ವ್ಯವಸ್ಥಾಪಕಮಂಜುನಾಥಸ್ವಾಮಿ, ಮುತ್ತಕದಹಳ್ಳಿ ಬಾಬು ಹಾಗೂ ಆಡಳಿತ ವರ್ಗ, ಗ್ರಾಮಸ್ಥರು ಹಾಜರಿದ್ದರು.

Facebook Comments

Sri Raghav

Admin