ಗ್ರಾಮೀಣ ಪೋಲಿಸ್ ಠಾಣೆಗೆ ನೂತನ ಪಿಎಸ್‍ಐ ಆಗಿ ಎಸ್.ಎಮ್. ಶಿರಗುಪ್ಪಿ

ಈ ಸುದ್ದಿಯನ್ನು ಶೇರ್ ಮಾಡಿ

 

4

ಇಳಕಲ್ಲ,ಫೆ.24- ಗ್ರಾಮೀಣ ಪೋಲಿಸ್ ಠಾಣೆಗೆ ನೂತನ ಪಿಎಸ್‍ಐ ಆಗಿ ಎಸ್.ಎಮ್. ಶಿರಗುಪ್ಪಿ ಕಳೆದ ಎರಡು ತಿಂಗಳಿಂದ ಖಾಲಿ ಇದ್ದ ಹುದ್ದೆಗೆ ಐಗಳಿ ನಗರದಿಂದ ವರ್ಗವಾಗಿ ಬಂದು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೋಲಿಸ್ ಠಾಣೆಯಿಂದ ಬಂದಿದ್ದಾರೆ. ಈ ಹಿಂದೆ ವಿಜಯಪುರ ಸಂಚಾರಿ ಪೊಲೀಸ್ ಠಾಣೆ, ಕುಡಚಿ ಹಾಗೂ ಅಥಣಿ ಠಾಣೆಗಳಲ್ಲಿ ಪ್ರಾಮಾಣಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ನೂತನವಾಗಿ ಅಸ್ಥಿತ್ವಕ್ಕೆ ಬಂದ ಗ್ರಾಮೀಣ ಪೋಲಿಸ್ ಠಾಣೆಯ ಸಾರಥ್ಯ ವಹಿಸಿ ಮೆರಗು ತಂದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin