ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

9

ಗದಗ,ಫೆ.8- ಸಂಪರ್ಕ ಸಾಧನಕ್ಕಾಗಿ ಉತ್ತಮ ರಸ್ತೆ ನಿರ್ಮಾಣ ಹಾಗೂ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ವಾಸಣ್ಣ ಕುರಡಗಿ ಹೇಳಿದರು.ಅವರು ತಾಲೂಕಿನ ಶಿರುಂಜ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಯೋಜನೆಯಡಿ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದ್ದು, ಹಂತ ಹಂತವಾಗಿ ಕೆಲಸ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮ ವಹಿಸಲಾಗಿದ್ದು, ಸರಕಾರ ಬಡಜನರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಅಭಿವೃದ್ಧಿ ಕಾರ್ಯಗಳಿಗೆ ಜನರು ಸಹಕಾರ ನೀಡಬೇಕೆಂದು ಹೇಳಿದರು.ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಆದಷ್ಟು ತೀವ್ರ ಗತಿಯಲ್ಲಿ ಕೆಲಸ ಮಾಡಬೇಕು.

ಸಾರ್ವಜನಿಕರು ಕೂಡ ಕೆಲಸ ಕುರಿತು ಎಚ್ಚರಿಕೆಯನ್ನು ವಹಿಸಬೇಕು. ತಮ್ಮ ಗ್ರಾಮದ ಕೆಲಸ ಆಗುವಾಗ ಗ್ರಾಮದ ಹಿರಿಯರು ಜಾಗೃತೆಯನ್ನು ವಹಿಸಬೇಕು ಅಂದಾಗ ಕೆಲಸಗಳು ಉತ್ತಮವಾಗಲು ಸಾಧ್ಯವೆಂದು ಹೇಳಿದರು.ಜಿಪಂ ಸದಸ್ಯ ಹನಮಂತಪ್ಪ ಪೂಜಾರ, ತಾಪಂ ಸದಸ್ಯೆ ಸಾವಿತ್ರವ್ವ ಸುಂಕದ, ಗ್ರಾಪಂ ಅಧ್ಯಕ್ಷೆ ಈರವ್ವ ಹೊಸಮನಿ, ಗ್ರಾಪಂ ಸದಸ್ಯರಾದ ಗೌರವ್ವ ಕೊಂಡಿಕೊಪ್ಪ, ಪದವ್ವ ಲೆಂಕಣ್ಣವರ, ಬಸವರಾಜ ಗುಡ್ಡದ, ಹಿರಿಯರಾದ ಸಿ.ಬಿ. ಕಪ್ಪತ್ತನವರ, ಶಂಕರಲಿಂಗ ಅರಳಿಕಟ್ಟಿ, ಎಸ್.ಎಮ್. ಗುಡ್ಡದ, ಶೇಖಪ್ಪ ಹುಡೇದ, ಎಸ್.ಎಮ್. ಬೆಂತೂರ, ಭೀಮಪ್ಪ ಲೆಂಕಣ್ಣವರ, ಆರ್.ವಿ. ಕಪ್ಪತ್ತನವರ ಸೇರಿದಂತೆ ಊರಿನ ಹಿರಿಯರು ಹಾಗೂ ಮುಂತಾದವರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin