ಗ್ರಾಮೀಣ ಮಟ್ಟದ ಹೈನುಗಾರಿಕೆ ಶಿಬಿರದ ಸದುಪಯೋಗಕ್ಕೆ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ºÉÆz¸ÀPÉÆvÉ

ಹೊಸಕೋಟೆ, ಅ.21- ಹೈನುಗಾರಿಕೆ ಗ್ರಾಮೀಣ ಮಟ್ಟದ ಹೈನುಗಾರಿಕೆಶಿಬಿರದ ಸದುಪಯೋಗ ಪಡಿಸಿಕೊಳ್ಳಲು ರೈತರಿಗೆ ಜಿಲ್ಲಾ ಉತಸುವಾರಿ ಸಚಿವರು ಹಾಗೂ ಕೃಷಿ ಸಚಿವರಾದಕೃಷ್ಣಭೈರೇಗೌಡ ಕರೆ ನೀಡಿದರು.ಹೊಸಕೋಟೆ ತಾಲ್ಲೂಕು ಕಸಬಾ ಹೋಬಳಿಯ ಕುರುಬರಹಳ್ಳಿಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಬಿರಗಳ ಉದ್ಘಾಟಿಸಿ ಮಾತನಾಡಿ, ಈಗಿನ ತಂತ್ರಜ್ಞಾನವನ್ನು ಬಳಸಿ ಇಲ್ಲಿಯೇ ಎಲ್ಲಾ ತರಹದ ಪ್ರಯೋಗಾಲಯದ ಜೊತೆಗೆ ಯಾವ ಕಾಯಿಲೆಗೆ ಯಾವ ಚಿಕಿತ್ಸೆ ನೀಡುಬೇಕು ಎಂದು ವೈದ್ಯರ ತಂಡ ತಿಳಿಸಿಕಕೊಡಲಿದೆ.

ಹಸುಗಳಿಗೆ ಸಿರಿಯಾದ ಆಹಾರ ಮತ್ತು ಯಾವ ಕಾಲಕ್ಕೆ ಯಾವ ಆಹಾರ ನೀಡಬೇಕು ಮೇದೆಗೆ ಬಂದು ಎಷ್ಟು ದಿನ ಹಾಲನ್ನು ಕರೆಯಬೇಕು ಎಂಬುದರ ಬಗ್ಗೆ ತಜ್ಞರು ನಿಮಗೆ ತಿಳಿಸುತ್ತಾರೆ ಅದರಂತೆ ಮಾಡಿದರೆ ಹೈನುಗಾರಿಕೆಯಿಂದ ಅಧಿಕ ಲಾಭ ಪಡೆಯಬಹುದು ಎಂದರು. ಹಣದ ಆಸೆಗಾಗಿ ಹಸು ಗರ್ಭಧರಿಸಿ ಹಸು ಕರು ಹಾಕುವತನಕ ಹಾಲನ್ನು ಕರೆಯುತ್ತಾರೆ. ಅದು ಸರಿಯಲ್ಲ. ಮುಂದಿನ ದಿನಗಳಲ್ಲಿ ಹೆಣ್ಣು ಹಸುಗಳು ಹೆಚ್ಚು ಗರ್ಭಧರಿಸುವ ತಂತ್ರಜ್ಞಾನ ಕಂಡು ಹಿಡಿದಿದ್ದು ಅದನ್ನು ಇನ್ನು ಎರಡು ಮೂರು ತಿಂಗಳಲ್ಲಿ ಸರ್ಕಾರ ಅನುಷ್ಠಾನಗೊಳಿಸಲಿದೆ ಎಂದರು.
ಜಿಪಂ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಸರ್ಕಾರದ ಸೌಲಭ್ಯ ರೈತರ ಮನೆ ಭಾಗಿಲಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಇಂತಹ ಕಾರ್ಯಕ್ರಮ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಭಾರಿಗೆ ಕುರುಬರಹಳ್ಳಿಯಲ್ಲಿ ಮಾಡುತ್ತಿರುವುದು ಈ ಭಾಗದ ರೈತರರಿಗೆ ಅನುಕೊಲವಾಗಲಿವೆ ಎಂದರು. ಜಿಪಂ ಉಪಾಧ್ಯಕ್ಷರಾದ ಅನಂತಕುಮಾರಿ, ಜಿಲ್ಲಾಧಿಕಾರಿ ಎಸ್.ಪಾಲಯ್ಯ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆಂಚೇಗೌಡ, ತಾಪಂ, ಉಪಾಧ್ಯಕ್ಷರಾದ ನಾಗವೇಣಿ ಶ್ರೀನಿವಾಸ್,ಕುಂಬಳಹಳ್ಳಿ ಗ್ರಾಪಂ ಅಧ್ಯಕ್ಷರಾದ ಶೋಭ ಜಯರಾಮ್, ಜಿಲ್ಲಾ ಪಂ ಸದಸ್ಯರಾದ ಸಿ.ನಾಗರಾಜ್ ಮತ್ತಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin