ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

KADURU--Student

ಕಡೂರು, ಆ.18- ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಟೌರ್ನ್ ಸೋಷಿಯಲ್ ರಿಕ್ರೀಯೇಷನ್ ಕ್ಲಬ್‍ನ ಅಧ್ಯಕ್ಷ ಎಂ.ಆರ್.ಟಿ. ಸುರೇಶ್ ಅಭಿಪ್ರಾಯಪಟ್ಟರು.ಕ್ಲಬ್‍ನ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಶಾಲೆಗಳ ವಿದ್ಯಾರ್ಥಿಗಳಿಗೆ ಸಿಕ್ಕಷ್ಟು ಸೌಲಭ್ಯಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ಇದರಿಂದ ಅಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆ ಆನಾವರಣಗೊಳ್ಳುತ್ತಿಲ್ಲ ಎಂದರು.

ಇದನ್ನು ಮನಗಂಡ ತಮ್ಮ ರಿಕ್ರೀಯೇಷನ್ ಕ್ಲಬ್ ತಮ್ಮ ಲಾಭಂಶದ ಹಣದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ನೀಡಲು, ನಿರ್ಧರಿಸಿ ತಾಲೂಕಿನ ಹೆಳವಾರ ಕಾಲೋನಿ ಮತ್ತು ಗಾಂಧಿನಗರ ಶಾಲೆಗಳ ವಿದ್ಯಾರ್ಥಿಗಳಿಗೆ ಬೆಲ್ಟ್, ಟೈ ಹಾಗೂ ಶಾಲೆಯ ಗುರುತಿನ ಚೀಟಿಯನ್ನು ನೀಡಿದೆ, ಇದರ ಜೊತೆ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪುರಸ್ಕಾರಿಸಲಾಗುತ್ತಿದೆ ಎಂದರು.  ರಿಕ್ರಿಯೇಷನ್ ಕ್ಲಬ್‍ನ ನಿರ್ದೇಶಕ ಎಸ್. ಬಸವರಾಜು ಮಾತನಾಡಿ, ನಮ್ಮ ಸಂಸ್ಥೆಯು ಕ್ರೀಡೆಗಳ ಜೊತೆಗೆ ಪಟ್ಟಣದ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಳಿಗೂ ಮಹತ್ವ ನೀಡುತ್ತಿದೆ ಎಂದರು.

ಇತ್ತೀಚೆಗೆ ಪ್ರಾರಂಭವಾಗಿರುವ ಪೊಲೀಸ್ ತರಭೇತಿ ಶಾಲೆಗೆ ಆಟೋಪಕರಣಗಳನ್ನು ಕೊಡುಗೆಯಾಗಿ ನೀಡಲಾಗಿದೆ, ಮುಂದೆಯು ಸಹ ಇದೇ ರೀತಿ ಹಿಂದುಳಿದ ಮತ್ತು ಬಡ ಮಕ್ಕಳು ವ್ಯಾಸಂಗ ಮಾಡುವ ಶಾಲೆಗಳನ್ನು ಗುರುತಿಸಿ ಶೈಕ್ಷಣಿಕ ಸೇವೆಗಳನ್ನು ನೀಡಲಾಗುವುದು ಎಂದು ಹೇಳಿದರು.ಕ್ಲಬ್‍ನ ಹಿರಿಯ ಸದಸ್ಯ ಹೆಚ್.ವಿ. ಗಿರೀಶ್, ನಿರ್ದೇಶಕರಾದ ಸುದರ್ಶನ್, ಜತನ್‍ಲಾಲ್ ಡಾಗ, ಶಿವಶಂಕರ್, ಲಕ್ಷ್ಮಣಪ್ಪ ಕಾರ್ಯದರ್ಶಿ ಯೋಗೀಶ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin