ಗ್ರಾಮ ಪಂಚಾಯ್ತಿ ಶೌಚಾಲಯಗಳ ನಿರ್ಮಾಣ ಅವ್ಯವಹಾರ : ಸಿಐಡಿ ತನಿಖೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

BR-Patil

ಬೆಂಗಳೂರು, ಫೆ.8-ಗ್ರಾಮ ಪಂಚಾಯ್ತಿಯಲ್ಲಿ ಶೌಚಾಲಯ ನಿರ್ಮಾಣದ ವೇಳೆ ನಡೆದಿರುವ ಅವ್ಯವಹಾರವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಆಗ್ರಹಿಸಿದರು. ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, 135 ಶೌಚಾಲಯ ನಿರ್ಮಾಣದ ವೇಳೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ನನ್ನ ಮನವಿ ಮೇರೆಗೆ ಸಚಿವರು ಇಲಾಖಾ ತನಿಖೆಗೆ ಆದೇಶಿಸಿದರು. ಅದರಂತೆ ಪ್ರಾಥಮಿಕ ತನಿಖೆಯಲ್ಲಿ ಅಳಂದ ತಾಲೂಕಿನ ಹೆಬ್ಬಳ್ಳಿ ಗ್ರಾ.ಪಂ. ಅಧ್ಯಕ್ಷ12, ಪ್ರತಿಯೊಬ್ಬ ಸದಸ್ಯರು ತಲಾ 7, ಜಿ.ಪಂ.ಸದಸ್ಯರು ತಲಾ 7 ಶೌಚಾಲಯಗಳನ್ನು ನಿರ್ಮಿಸಿರುವುದಾಗಿ ನಕಲಿ ದಾಖಲೆ ತಯಾರಿಸಿ ಬಿಲ್ ಪಡೆದಿದ್ದಾರೆ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ.

ಅವ್ಯವಹಾರ ಸಾಬೀತಾದ ಹಿನ್ನೆಲೆಯಲ್ಲಿ ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪಿಡಿಒನನ್ನು ಅಮಾನತು ಮಾಡಿದ್ದಾರೆ.ವಿಚಾರಣೆ ಅಲ್ಲಿಗೇ ನಿಂತಿದೆ. ಸ್ಥಳೀಯ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಸಿಐಡಿ ತನಿಖೆ ನಡೆಸಿ ಎಂದು ಪಟ್ಟು ಹಿಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಚ್.ಕೆ.ಪಾಟೀಲ್ ಅವರು, ಈಗಾಗಲೇ ತನಿಖೆ ನಡೆದಿದೆ. ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀವು ಹೇಳುವಂತೆ ಅವ್ಯವಹಾರ ದೊಡ್ಡ ಪ್ರಮಾಣದಲ್ಲಿದ್ದು, ದಾಖಲೆಗಳು ಸ್ಪಷ್ಟವಾಗಿದ್ದರೆ, ಹಿರಿಯ ಅಧಿಕಾರಿಯೊಬ್ಬರಿಂದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಜರುಗಿಸಲು ಸೂಕ್ತ ನಿರ್ದೇಶನ ನೀಡುತ್ತೇನೆ. ಎಲ್ಲವೂ ಸಾಬೀತಾದ ಮೇಲೆ ಸಿಐಡಿ ತನಿಖೆ ಅಥವಾ ಮತ್ತೊಂದು ತನಿಖೆ ಎಂದು ಹೋದರೆ ಪ್ರಕರಣಗಳ ಹಸ್ತಾಂತರ ಪ್ರಕ್ರಿಯೆಯೆ ಆರು ತಿಂಗಳವರೆಗೆ ಆರಂಭವಾಗಿ ಭ್ರಷ್ಟಾಚಾರಿಗಳು ನಿರಮ್ಮಳವಾಗಿರುತ್ತಾರೆ. ಅದಕ್ಕೆ ಏಕೆ ಅವಕಾಶ ಕೊಡಬೇಕು ಎಂದು ಹೇಳಿದರು.

ಶಾಸಕರು ಮತ್ತು ಸಚಿವರ ನಡುವೆ ಸಿಐಡಿ ತನಿಖೆ ವಿಷಯವಾಗಿ ಚರ್ಚೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ ಶಾಸಕ ಕೆ.ಎನ್.ರಾಜಣ್ಣ, ಇಬ್ಬರೂ ಪಾಟೀಲರೇ ಇದ್ದಾರೆ. ಯಾವ ತನಿಖೆ ಬೇಕು? ಏನು ಕ್ರಮ ಜರುಗಿಸಬೇಕು? ಎಂಬುದನ್ನು ಸಚಿವರ ಕೊಠಡಿಯಲ್ಲಿ ಕುಳಿತು ಚರ್ಚಿಸಿ ನಿರ್ಧಾರ ಮಾಡಿ. ಇಲ್ಲಿ ಸುಮ್ಮನೆ ಏಕೆ ಚಚೆ ್ ಮಾಡುತ್ತೀರಾ ಎಂದು ಸಲಹೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin