ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ವೀರಪುಲಕೇಶಿ ಕೋ ಆಪ್ ಬ್ಯಾಂಕ್

ಈ ಸುದ್ದಿಯನ್ನು ಶೇರ್ ಮಾಡಿ

BELAGAM-4

ಬಾದಾಮಿ,ಸೆ.7- ಜಿಲ್ಲೆಯಲ್ಲಿಯೇ ಪ್ರತಿಷ್ಟಿತ ಬ್ಯಾಂಕಗಳಲ್ಲಿ ಒಂದಾದ ನಗರದ ಶ್ರೀ ವೀರಪುಲಕೇಶಿ ಕೋ ಅಪರೇಟಿವ್ ಬ್ಯಾಂಕ್ 52 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ. ಅದರಂತೆ ಬ್ಯಾಂಕಿನ ಮೇಲೆ ಗ್ರಾಹಕರು ವಿಶ್ವಾಸ ಇಡಬೇಕು. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದಂತೆ ಬ್ಯಾಂಕ್ ನೋಡಿಕೊಳ್ಳುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಹೇಳಿದರು.  ನಗರದ ವೀರಪುಲಕೇಶಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2016-17ನೇ ಸಾಲಿನ 52ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತ ನಾಡಿದ ಅವರು ಬ್ಯಾಂಕಿನ ಪ್ರಗತಿಗೆ ಸದಸ್ಯರು ಮತ್ತು ಸಿಬ್ಬಂದಿ ಸಹಕಾರ ಬಹಳ ಮುಖ್ಯವಾಗಿದೆ. ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡುವುದರಿಂದ ಏಳ್ಗೆಗೆ ಸಹಕಾರಿಯಾಗಲಿದೆ ಎಂದರು.

1200 ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಸಾಲ ವಸೂಲಾತಿ ಯಲ್ಲಿ ಬ್ಯಾಂಕ್ ಹಿಂದೆ ಸರಿದಿತ್ತು. ಆದ್ದರಿಂದ ಗ್ರಾಹಕರ ಸಹಕಾರ ಬಹಳ ಮುಖ್ಯವಾಗಿದೆ. ಬರುವ ಮೇ ತಿಂಗಳಲ್ಲಿ ಬ್ಯಾಂಕು ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿದೆ. ಸಹಕಾರಿ ಕ್ಷೇತ್ರದ ಬ್ಯಾಂಕುಗಳಿಗೆ ಆದಾಯ ತೆರಿಗೆ ಹೊರೆ ಯಾಗಲಿದೆ ಅದನ್ನು ಕಡಿಮೆ ಮಾಡಲು ಎಲ್ಲರೂ ಸೇರಿ ಸರ್ಕಾರದ ಗಮನಕ್ಕೆ ತರಬೇಕು ಎಂದರು.ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ಸಹಕಾರ ಮಾಡುವದು ಬಹಳ ಮುಖ್ಯ. ಪ್ರಾರಂಭದಲ್ಲಿ ನೂರಾರು ಸದಸ್ಯರನ್ನು ಹೊಂದಿದ ಶ್ರೀ ವೀರಪುಲಕೇಶಿ ಕೋ ಆಪರೇಟಿವ್ ಬ್ಯಾಂಕ 52ವರ್ಷಗಳಿಂದ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬಂದಿದೆ.

ಇವತ್ತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೋಲಿಸಿ ನೋಡಿದಾಗ ಅವರಿಗಿಂತ ನಮ್ಮ ಬ್ಯಾಂಕುಗಳ ಎನ್.ಪಿ.ಎ. ಕಡಿಮೆ ಪ್ರಮಾಣಕ್ಕೆ ತಂದು 12 ಶಾಖೆ ಗಳೊಂದಿಗೆ ಸಮಾಜದಲ್ಲಿ ಎತ್ತರ ಮಟ್ಟಕ್ಕೆ ಬೆಳೆದು ನಿಂತಿವೆ. ಬ್ಯಾಂಕಿನಲ್ಲಿ ಯಾವತ್ತೂ ರಾಜಕೀಯ ಮಾಡಬಾರದು ಬ್ಯಾಂಕುಗಳ ಅಭಿವೃದ್ಧಿಗೆ ಕುಂಟಿತ ವಾಗುತ್ತದೆ ಎಲ್ಲರೂ ಸೇರಿ ಒಮ್ಮತದಿಂದ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಒಂದು ಸಂದರ್ಭದಲ್ಲಿ ನನಗೂ ಈ ಬ್ಯಾಂಕ ಆರ್ಥಿಕವಾಗಿ ಸಹಾಯ ಮಾಡಿದೆ ಒಳ್ಳೆಯದನ್ನು ಮಾಡಿದವರನ್ನು ನೆನೆಪಿಸಿಕೊಳ್ಳಲೇಬೇಕು ನಾನು ಈ ಬ್ಯಾಂಕಿನ ಸದಸ್ಯ ಇನ್ನು ಹೆಚ್ಚು ಬ್ಯಾಂಕು ಉತೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.

ವಿದಾನ ಪರಿಷತ್ ಸದಸ್ಯ ಅರುಣ ಶಹಾಪೂರ ಮಾತನಾಡಿ ಈ ಬಾಗದ ಪ್ರತಿಷ್ಟಿತ ಬ್ಯಾಂಕಗಳಲ್ಲಿ ಒಂದಾದ ಶ್ರೀ ವೀರಪುಲಕೇಶಿ ಬ್ಯಾಂಕ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗುರುತಿಸಿದ್ದು ಶ್ಯಾಘನೀಯ ಉತ್ತರ ಕರ್ನಾಕಟದಲ್ಲಿ ಪ್ರತಿವರ್ಷ ಇಂತಹ ಒಂದು ಕಾರ್ಯಕ್ರಮದಲ್ಲಿ ಸನ್ಮಾನಿಸು ತ್ತ್ತಿರುವುದು ಮೊದಲು ಎಂದರೆ ತಪ್ಪಾಗಲಾರದು ಎಂದರು. ಸಹಕಾರಿ ಸಂಘಗಳ ಸಹಾಯಕ ಪ್ರಬಂಧಕ ಪಿ.ಬಿ. ಶೆಲ್ಲಿಕೇರಿ ಮಾತನಾಡಿ ಯಾವುದೇ ಸಂಘ ಅಥವಾ ಸಂಸ್ಥೆ ಚನ್ನಾಗಿ ಬೆಳೆಯಬೇಕಾದರೆಸದಸ್ಯರ ಸಹಕಾರ ಬಹಳ ಮುಖ್ಯವಾಗಿದೆ ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಬ್ಯಾಂಕ ಅಭೀವೃದ್ಧಿ ಹೊಂದಲು ಸಾದ್ಯ. ಇಲ್ಲದಿದ್ದರೆ ಆರ್ಥಿಕವಾಗಿ ಕುಂಟಿತವಾಗುತ್ತದೆ ಇದನ್ನರಿತು ಸದಸ್ಯರು ಬ್ಯಾಂಕಿನ ಶ್ರೇಯೋಬಿವೃದ್ಧಗೆ ಕೈ ಜೋಡಿಸಬೇಕೆಂದು ಹೇಳಿದರು.

ಇದೆ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರ ಮಕ್ಕಳಾದ ಪ್ರತಿಬಾವಂತ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಎಂ.ಆರ್. ಖ್ಯಾಡದ, ಎ.ಸಿ.ಪಟ್ಟಣದ, ಜಿ.ಎಚ್. ಘಟ್ಟದ, ಕೆ.ಬಿ. ಜನಾಲಿ, ವಿ.ಕೆ. ಬಾಗಲೆ, ಬಸವರಾಜ ಟೆಂಗಿನಕಾಯಿ, ಎಸ್.ಎಚ್. ಹಂಡಿ, ಕಮಲಮ್ಮ ಜಿಗಬಡ್ಡಿ, ಎಸ್.ಬಿ. ಕೊಣ್ಣೂರ, ಎನ್.ಎಂ. ಗೌಡರ, ಡಿ.ಎಂ. ಪೈಲ್, ಐ.ಕೆ. ಪಟ್ಟಣಶೆಟ್ಟಿ, ಬಿ.ಸಿ. ಹಿರೇಹಾಳ, ಎಂ.ಎಸ್. ಹಿರೇಹಾಳ, ಕೆ.ಬಿ. ಬಂಗಾರಶೆಟ್ಟರ, ಎಸ್.ಆರ್. ಮೆಳ್ಳಿ, ಹೊನ್ನಯ್ಯ ಹಿರೇಮಠ, ವಿ.ಎಸ್. ಮಗದುಮ್, ಎಚ್.ವಾಯ್. ಗದ್ದನಕೇರಿ, ಇದ್ದರು. ಎಂ.ಎಸ್. ಪಾಟೀಲ ಸ್ವಾಗತಿಸಿದರು. ಆರ್.ವಾಯ್.ಪಾಟೀಲ ನಿರೂಪಿಸಿದರು. ಬಿ.ಎಸ್.ಅಂಗಡಿ ವಂದಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin