ಗ್ರೀಕ್ ದ್ವೀಪ ಗಢ ಗಢ : ಪ್ರಬಲ ಭೂಕಂಪದಲ್ಲಿ 6 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Greece-01

ಕೋಸ್(ಗ್ರೀಸ್), ಜು.21-ಗ್ರೀಕ್ ದ್ವೀಪದಲ್ಲಿ ಇಂದು ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಆರು ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅನೇಕ ಕಟ್ಟಡಗಳು ಮತ್ತು ಕೋಟೆಯೊಂದಕ್ಕೆ ತೀವ್ರ ಹಾನಿಯಾಗಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಕೋಸ್ ದ್ವೀಪದ ಸಮೀಪವೇ ಭೂಕಂಪದ ಕೇಂದ್ರ ಬಿಂದು ಇದ್ದ ಕಾರಣ, ಭಾರೀ ಅನಾಹುತ ಸಂಭವಿಸಿದೆ. ಪ್ರದೇಶದಲ್ಲಿ ಹಳೆ ಕಟ್ಟಡಗಳು ಉರುಳಿ ಬಿದ್ದಿದ್ದು, ಅನೇಕ ಮನೆಗಳು ಭಾಗಶಃ ಹಾನಿಗೀಡಾಗಿವೆ. ಈ ದ್ವೀಪದಲ್ಲಿ ಭೂಕಂಪದ ತೀವ್ರತೆಗೆ ಸಾಕ್ಷಿಯಾಗಿ ಅವಶೇಷಗಳು ಎಲ್ಲೆಡೆ ಕಂಡುಬಂದಿವೆ.

ಈ ದ್ವೀಪದ ನೆರೆಹೊರೆ ಪ್ರದೇಶಗಳಲ್ಲಿ ಭೂಕಂಪದ ಹೊಡೆತ ಉಂಟಾಗದಿದ್ದರೂ, ಲಘು ಕಂಪನಗಳಿಂದಾಗಿ ದ್ವೀಪವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ವಿನಾಶಕಾರಿ ಭೂಕಂಪದಿಂದ ಈವರೆಗೆ ಆರು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ನೆಲಸಮವಾದ ಕಟ್ಟಡಗಳ ಅವಶೇಷಗಳಡಿ ಅನೇಕರು ಸಿಲುಕಿರುವ ಸಾಧ್ಯತೆ ಇದೆ ಎಂದು ಕೋಸ್ ದ್ವೀಪದ ಮೇಯರ್ ಗಿಯೋರ್‍ಗೋಸ್ ಕಿರಿಟಿಸ್ ಆತಂಕ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin