ಗ್ರೀಸ್ನ ಲೆಸ್ಬೊಸ್ ದ್ವೀಪದ ವಲಸಿಗರ ಶಿಬಿರದಲ್ಲಿ ಅಗ್ನಿ ಆಕಸ್ಮಿಕ : ಸಹಸ್ರಾರು ಮಂದಿ ಪಲಾಯನ
ಈ ಸುದ್ದಿಯನ್ನು ಶೇರ್ ಮಾಡಿ
ಅಥೆನ್ಸ್, ಸೆ.20-ಗ್ರೀಸ್ನ ಲೆಸ್ಬೊಸ್ ದ್ವೀಪದ ವಲಸಿಗರ ಶಿಬಿರದಲ್ಲಿ ನಿನ್ನೆ ರಾತ್ರಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿ ಸಾವಿರಾರು ಮಂದಿ ಪಲಾಯನ ಮಾಡಿದ್ದಾರೆ. ಈ ಬೆಂಕಿ ಸಂಭವಿಸುವುದಕ್ಕೂ ಮುನ್ನ ಈ ಪ್ರದೇಶದ ನಿರಾಶ್ರಿತರಲ್ಲಿ ನಿನ್ನೆ ಸಂಜೆಯಿಂದಲೇ ಒಂದು ರೀತಿಯ ಉದ್ವೇಗ ಕಂಡುಬಂದಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೆಂಕಿ ಆಕಸ್ಮಿಕ ಕಾರಣದ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ. ವಲಸಿಗರ ಶಿಬಿರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು. ಇದಾದ ನಂತರ ಸಾವಿರಾರು ಮಂದಿ ಪಲಾಯನ ಮಾಡಿದರು. ಶಿಬಿರದಲ್ಲಿದ್ದ ಬಹುತೇಕ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ಈ ದ್ವೀಪದ ವಲಸಿಗರು ಮತ್ತು ನಿರಾಶ್ರಿತರ ಶಿಬಿರಗಳು ಕಿಕ್ಕಿರಿದು ತುಂಬಿದ್ದು, ಅಗಾಗ ಹಿಂಸಾಚಾರಗಳು ಉಲ್ಬಣವಾಗುತ್ತಿವೆ. 7,500 ಜನರಷ್ಟೇ ಇರಬಹುದಾದ ಈ ಶಿಬಿರಗಳಲ್ಲಿ 13,500ಕ್ಕೂ ಹೆಚ್ಚು ವಲಸಿಗರು ಆಶ್ರಯ ಪಡೆದಿದ್ದರು.
► Follow us on – Facebook / Twitter / Google+
Facebook Comments