ಗ್ರೇಟ್ ಖಲಿಯನ್ನು ಕೆಣಕಿ ಒದೆ ತಿಂದ ವಿದೇಶಿಗರು (ವಿಡಿಯೋ )

ಈ ಸುದ್ದಿಯನ್ನು ಶೇರ್ ಮಾಡಿ


ಚಂಢೀಗಢ ಅ.15 : ರೆಸ್ಲಿಂಗ್ ರಿಂಗ್ ನಲ್ಲಿ ಎದುರಾಳಿ ರೆಸ್ಲರ್ ಗಳ ಮೂಳೆ ಮುರಿಯುವ ದಿ ಗ್ರೇಟ್ ಖಲಿ ತಾಳ್ಮೆ ಕಳೆದುಕೊಂಡರೆ ಗತಿ ಏನು? ಹೌದು ರಿಂಗ್ ಹೊರಗಡೆ ತಾಳ್ಮೆ ಕಳೆದುಕೊಂಡ ಖಲಿ ವಿದೇಶಿ ರೆಸ್ಲರ್ ಗಳು ತಂಗಿದ್ದ ರೂಂಗೆ ನುಗ್ಗಿ ತಮ್ಮ ಉಗ್ರರೂಪ ತೋರಿಸಿದ್ದಾರೆ. ಭಾರತದಲ್ಲಿ ಆಯೋಜಿಸಿದ್ದ ರೆಸ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಿದೇಶಿ ರೆಸ್ಲರ್ ಗಳು ಬಂದಿದ್ದರು. ಈ ವೇಳೆ ಕಾರಣಾಂತರಗಳಿಂದ ಪಂದ್ಯಾವಳಿ ರದ್ದಾಗಿತ್ತು. ಇದಕ್ಕೆ ಖಲಿಯೇ ಕಾರಣ ಎಂದು ತಿಳಿಸಿದ ವಿದೇಶಿ ರೆಸ್ಲರ್ ಗಳು ಜಲಂಧರ್ನಲ್ಲಿ ಗ್ರೇಟ್ ಖಲಿ ನಡೆಸುತ್ತಿರುವ ರೆಸ್ಲಿಂಗ್ ಅಕಾಡೆಮಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಅಕಾಡೆಮಿಯಲ್ಲಿ ತರಬೇತಿ ನಿರತರ ಮೇಲೆ ಹಲ್ಲೆ ಮಾಡಿ ವಿದೇಶಿ ರೆಸ್ಲರ್ ಗಳು ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. ಈ ವಿಷಯ ತಿಳಿಯುತ್ತಲೇ ಆಕ್ರೋಶಗೊಂಡ ಖಲಿ ವಿದೇಶಿ ರೆಸ್ಲರ್ ಗಳು ತಂಗಿದ್ದ ಹೊಟೇಲ್ ಗೆ ನುಗ್ಗಿ ಮನಬಂದಂತೆ ಥಳಿಸಿದ್ದಾರೆ. ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin