‘ಗ್ರೇಟ್ ವರ್ಕ್ ಇವಾಂಕಾ’ : ಮಗಳನ್ನು ಹೊಗಳಿದ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump--Ivanka--02

ವಾಷಿಂಗ್ಟನ್, ನ.29- ಹೈದರಾಬಾದ್‍ನಲ್ಲಿ ನಡೆಯುತ್ತಿರುವ 8ನೇ ವಾರ್ಷಿಕ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ ಮಹಿಳಾ ಉದ್ಯಮಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿರುವ ತಮ್ಮ ಪುತ್ರಿ ಇವಾಂಕಾರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶಂಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್, ಇದು ದೊಡ್ಡ ಕಾರ್ಯ ಇವಾಂಕಾ, ಮಹಿಳಾ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ನಿನ್ನ ಸಲಹೆಗಳು ಔಚಿತ್ಯವಾಗಿವೆ ಎಂದು ಹೇಳಿದ್ಧಾರೆ.

ಲಿಂಗ ಆಧಾರಿತ ಉದ್ಯಮಶೀಲತೆಯಲ್ಲಿನ ಅಂತರವನ್ನು ಕೊನೆಗಾಣಿಸುವುದರಿಂದ ವಿಶ್ವಾದ್ಯಂತ ಜಾಗತಿಕ ಜಿಡಿಪಿಯಲ್ಲಿ (ಒಟ್ಟು ಸ್ಥಳೀಯ ಉತ್ಪನ್ನ) ಶೇ.2ರಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಇವಾಂಕಾ ನಿನ್ನೆ ಪ್ರಧಾನ ಭಾಷಣದಲ್ಲಿ ವಿಶ್ಲೇಷಣೆ ಮಾಡಿದ್ದರು. ಮಹಿಳಾ ಉದ್ಯಮಿಗಳಿಗೆ ಬಂಡವಾಳ, ಸಂಪರ್ಕ ಜಾಲಗಳು, ಮಾರ್ಗದರ್ಶಕರು ಮತ್ತು ಸಮಾನತೆ ಕಾನೂನುಗಳು ಲಭ್ಯವಾಗಬೇಕು.ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ನಮ್ಮ ಸಮಾಜಕ್ಕೆ, ನಮ್ಮ ಆರ್ಥಿಕತೆಗೆ ಹಾಗೂ ಆಯಾ ದೇಶಗಳಿಗೆ ತುಂಬಾ ಪ್ರಯೋಜನವಾಗುತ್ತದೆ ಎಂದು ಇವಾಂಕಾ ವಿಮರ್ಶಿಸಿದ್ದರು.

Facebook Comments

Sri Raghav

Admin