ಗ್ಲಾಮರ್ ಟೆನಿಸ್ ತಾರೆ ಸಾನಿಯಾಗೆ ಇಂದು ಜನ್ಮದಿನದ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

 

sania

ಹೈದರಾಬಾದ್, ನ.15- ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗೆ  ಜನ್ಮದಿನದ ಸಡಗರ-ಸಂಭ್ರಮ. ಅನೇಕ ಗಣ್ಯರು, ಕ್ರೀಡಾಲೋಕದ ಖ್ಯಾತನಾಮರು ಮತ್ತು ಅಭಿಮಾನಿಗಳು ಸಾನಿಯಾಗೆ ಶುಭ ಕೋರಿದ್ದಾರೆ. ಸಾನಿಯಾ ಮಿಜರ್ 15ನೇ ನವೆಂಬರ್ 1986ರಂದು ಜನಿಸಿದರು. ಬಾಲ್ಯದಿಂದಲೂ ಟೆನಿಸ್ ಬಗ್ಗೆ ವಿಶೇಷ ಒಲವು ಮೈಗೂಡಿಸಿಕೊಂಡವರು. 2003ರಿಂದ ತಮ್ಮ ಕ್ರೀಡಾವೃತ್ತಿ ಆರಂಭಿಸಿ 2013ರಲ್ಲಿ ಸಿಂಗಲ್ಸ್ ಪಂದ್ಯಗಳಿಂದ ನಿವೃತ್ತಿಯಾಗುವ ತನಕ ಭಾರತದ ನಂಬರ್ 1 ಆಟಗಾರ್ತಿ ಎಂದು ವುಮೆನ್ಸ್ ಟೆನಿಸ್ ಅಸೋಸಿಯೇಷನ್‍ನಿಂದ ಶ್ರೇಯಾಂಕಿತರಾಗಿದ್ದರು. ಪ್ರಸ್ತುತ ಮಹಿಳೆಯರ ಡಬಲ್ಸ್ ರ‍್ಯಾಂಕಿಂಗ್‌ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದ್ದಾರೆ.

 
ತಮ್ಮ ಕ್ರೀಡಾ ಬದುಕಿನುದ್ದಕ್ಕೂ ಸಾನಿಯಾ ಭಾರತದ ಬಹು ಯಶಸ್ವಿ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಯೊಂದಿಗೆ ದೇಶದ ಉನ್ನತ ಅಥ್ಲೆಟಿಕ್ ಎಂಬ ಹೆಸರು ಗಳಿಸಿದ್ದರು. ವಿಶ್ವ ಮಾಜಿ ನಂಬರ್ 1 ಆಟಗಾರ್ತಿಯರಾದ ಮಾರ್ಟಿನಾ ಹಿಂಗಿಸ್, ಡಿನಾರಾ ಸಫೀನಾ, ವಿಕ್ಟೋರಿಯಾ ಅಜರೆಂಕಾ, ಸ್ವೆಟ್ಲಾನಾ ಕುಜ್‍ನೆಟ್‍ಸೋವಾ, ವೆರಾ ಜೋವೊನವರಾ ಮತ್ತು ಮಾರಿಯನ್ ಬಾರ್ಟೊನಾ ಅವರುಗಳ ವಿರುದ್ಧ ಸಾನಿಯಾ ಜಯಗಳಿಸಿದ್ದು ಒಂದು ಸಾಧನೆಯಾಗಿದೆ. 2007ರಲ್ಲಿ ಸಾನಿಯಾ ವಿಶ್ವ ಶ್ರೇಯಾಂಕದಲ್ಲಿ 27ನೇ ಸ್ಥಾನ ಅಲಂಕರಿಸಿದ್ದರು. ಆದರೆ ಮೊಣಕೈ ಗಾಯದಿಂದಾಗಿ ತಮ್ಮ ಸಿಂಗಲ್ಸ್ ಪಂದ್ಯದಲ್ಲಿ ಆಡುವುದನ್ನು ನಿಲ್ಲಿಸಿ ಡಬಲ್ಸ್ ಸಕ್ರ್ಯೂಟ್‍ನತ್ತ ಗಮನ ಹರಿಸಿದರು.
ತಮ್ಮ ಕ್ರೀಡಾ ವೃತ್ತಿಯಲ್ಲಿ 1 ದಶಲಕ್ಷ ಡಾಲರ್ ಗಳಿಸಿರುವ ಸಾನಿಯಾ ಆರು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದಾರೆ. ಇದರಲ್ಲಿ ಮೂರು ಮಹಿಳಾ ಡಬಲ್ಸ್ ಗೆಲುವಿನ ಸಾಧನೆಯೂ ಸೇರಿದೆ. 2014ರಲ್ಲಿ ಡಬ್ಲ್ಯುಟಿಎ ಫೈನಲ್ಸ್‍ಗೆ ಅರ್ಹತೆ ಪಡೆದಿದ್ದರು. ಒಂದು ಗ್ರಾನ್ ಸ್ಲಾಮ್ ಪಂದ್ಯಾವಳಿಯಲ್ಲಿ ವಿಜಯಿಯಾದ ಸಾನಿಯಾ, ಮೂರು ಬಹು ಮುಖ್ಯ ಕ್ರೀಡಾ ಪಂದ್ಯಗಳಲ್ಲಿ 6 ಚಿನ್ನದ ಪದಕಗಳು ಸೇರಿದಂತೆ 14 ಮೆಡಲ್‍ಗಳನ್ನು ಕೊರಳಿಗೇರಿಸಿದ್ದಾರೆ. ಏಷ್ಯನ್ ಗೇಮ್ಸ್, ಕಾಮನ್‍ವೆಲ್ತ್ ಗೇಮ್ಸ್ ಮತ್ತು ಆಪ್ರೊ -ಏಷ್ಯನ್ ಗೇಮ್‍ಗಳಲ್ಲಿ ಇವರು ಮಾಡಿದ ಸಾಧನೆ ಗಮನಾರ್ಹ.
2005ರ ಅಕ್ಟೋಬರ್‍ನಲ್ಲಿ ಟೈಮ್ ಸಂಸ್ಥೆಯಿಂದ ಏಷ್ಯಾದ 50 ನಾಯಕಿಯರಲ್ಲಿ ಮಿಜರ್ ಹೆಸರು ಸೇರ್ಪಡೆಯಾಗಿತ್ತು.

 

ದಿ ಎಕೊನಾಮಿಕ್ಸ್ ಟೈಮ್ಸ್ ಭಾರತದ ಹೆಮ್ಮೆಯ 33 ಮಹಿಳೆಯರ ಪಟ್ಟಿಯಲ್ಲಿ ಸಾನಿಯ ಸ್ಥಾನಪಡೆದಿದ್ದರು. ನವೆಂಬರ್ 25, 2013ರಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಳಿಸುವ ಉದ್ದೇಶದೊಂದಿಗೆ ಅಂತಾರಾಷ್ಟ್ರೀಯ ದಿನದಂದು ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾಗಾಗಿ ವಿಶ್ವಸಂಸ್ಥೆಯ ಮಹಿಳೆಯರ ಸದ್ಬಾವ ರಾಯಭಾರಿ (ಗುಡ್‍ವಿಲ್ ಅಂಬಾಸಿಡರು) ಆಗಿ ನೇಮಕಗೊಂಡಿದ್ದರು. 2016ರ ಟೈಮ್ಸ್ ನಿಯತಕಾಲಿಕದ ವಿಶ್ವದ 100 ಬಹು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸಾನಿಯಾ ಮಿಜರ್ ಹೆಸರು ಸಹ ರಾರಾಜಿಸುತ್ತಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin