ಘಾಜಿಯಾಬಾದ್‍ನಲ್ಲಿ ಪಟಾಕಿ ಗೋದಾಮು ಸ್ಪೋಟಗೊಂಡು ಐವರ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಘಾಜಿಯಾಬಾದ್, ಏ.29-ಪಟಾಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಆನಂತರ ಸಂಭವಿಸಿದ ಸ್ಫೋಟದ ದುರಂತದಲ್ಲಿ ಐವರು ಸಜೀವ ದಹನವಾಗಿ ಅನೇಕರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್‍ನ ಸಾಹಿಬಾಬಾದ್‍ನಲ್ಲಿರುವ ಫಾರೂಕ್‍ನಗರದಲ್ಲಿ ನಡೆದಿದೆ. ಕಾರ್ಮಿಕನೊಬ್ಬ ಸೇದಿ ಎಸೆದ ಬೀಡಿಯಿಂದ ಬೆಂಕಿ ಹೊತ್ತಿಕೊಂಡು ಗೋದಾಮಿನಲ್ಲಿ ದಾಸ್ತಾನು ಇಡಲಾಗಿದ್ದ ಪಟಾಕಿಗಳು ಸ್ಫೋಟಗೊಂಡವು. ಈ ದುರ್ಘಟನೆಯಲ್ಲಿ ಗೋದಾಮಿನ ಮಾಲೀಕ ಪಪ್ಪು, ನೌಕರರಾದ ಅಷ್ಪಾಕ್, ರಫೀಕ್, ಸಗೀರ್ ಮತ್ತು ಕುತುಬುದ್ದೀನ್ ಸುಟ್ಟು ಕರಕಲಾಗದರು.ಬೆಂಕಿ ಮತ್ತು ಸ್ಫೋಟದ ಸುದ್ದಿ ತಿಳಿದು 10 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಹಲವು ಗಂಟೆಗಳ ಕಾಲ ಶ್ರಮಿಸಿ ಅಗ್ನಿ ಪ್ರಕೋಪ ನಿಯಂತ್ರಿಸಿದರು.
ಪಟಾಕಿಗಳನ್ನು ಸಂಗ್ರಹಿಸಿಡಲು ಈ ಗೋದಾಮಿನಲ್ಲಿ ಅಗತ್ಯ ಅನುಮತಿ ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin