ಮ್ಯಾಥ್ಯೂ ಮರಣಮೃದಂಗಕ್ಕೆ ಹೈಟಿ ತತ್ತರ : 900ಕ್ಕೂ ಹೆಚ್ಚು ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Hyti-01

ಚಂಟಲ್, ಹೈಟಿ/ಕೊಕಾ ಬೀಚ್, ಅ.8-ಕೆರಿಬಿಯನ್ ದ್ವೀಪರಾಷ್ಟ್ರ ಹೈಟಿಯಲ್ಲಿ ಭೀಕರ ಮ್ಯಾಥ್ಯೂ ಚಂಡಮಾರುತಕ್ಕೆ ಈವರೆಗೆ 900ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈ ವಿನಾಶಕಾರಿ ಚಂಡಮಾರುತ ಈಗಾಗಲೇ ಅಮೆರಿಕದ ಸೌತ್ ಕರೋಲಿನಾ ಮತ್ತು ಫ್ಲಾರಿಡಾ ಮೇಲೂ ಅಪ್ಪಳಿಸಿದ್ದು, ಭಾರೀ ಪ್ರಮಾಣದ ಹಾನಿಯುಂಟಾಗಿದೆ.
ಅಮೆರಿಕ ಖಂಡದ ಅತ್ಯಂತ ಬಡರಾಷ್ಟ್ರ ಹೈಟಿಯಲ್ಲಿ ಮ್ಯಾಥ್ಯೂ ಚಂಡಮಾರುತಕ್ಕೆ ಕನಿಷ್ಠ 842 ಮಂದಿ ಮೃತರಾಗಿರುವುದನ್ನು ಖಚಿತಪಡಿಸಿರುವ ಅಧಿಕಾರಿಗಳು ಸಾವು-ನೋವು ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದಾರೆ.

Hyti 1
Hyti 4

 

ಹೈಟಿ, ಜಮೈಕಾ ಮತ್ತು ಕ್ಯೂಬಾದಲ್ಲಿ ಜಲಪ್ರಳಯ ಸೃಷ್ಟಿಸಿರುವ ಚಂಡಮಾರುತದಿಂದ ನೂರಾರು ಮನೆಗಳು, ಕಟ್ಟಡಗಳು ನಿರ್ನಾಮವಾಗಿವೆ. ಗ್ರಾಮ ಮತ್ತು ಪಟ್ಟಣಗಳು ಹೇಳಹೆಸರಿಲ್ಲದಂತೆ ನಾಶವಾಗಿದ್ದು, ಸಂಪೂರ್ಣ ಜಲವೃತವಾಗಿವೆ. ಜನಜೀವನ ಅಸ್ತವ್ಯಸ್ತವಾಗಿದ್ದು, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ.  ಈ ದ್ವೀಪರಾಷ್ಟ್ರಗಳನ್ನು ಅಲ್ಲೋಲ ಕಲ್ಲೋಲ ಮಾಡಿರುವ ಮಾಥ್ಯೂ ಗಂಟೆಗೆ 230 ಕಿ.ಮೀ.ವೇಗದಲ್ಲಿ ಸೌತ್ ಕರೋಲಿನಾ ಮತ್ತು ಪ್ಲಾರಿಡಾದ ಮೇಲೂ ಅಪ್ಪಳಿಸಿದ್ದು, ಅಲ್ಲೂ ಭಾರೀ ಹಾನಿಯಾಗಿದೆ. ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಈ ನಗರಗಳಲ್ಲಿ ಸಾವು-ನೋವಿನ ವರದಿಗಳಿಲ್ಲದಿದ್ದರೂ ಪರಿಸ್ಥಿತಿ ಭೀಕರವಾಗಿದೆ. 6 ಲಕ್ಷಕ್ಕೂ ಹೆಚ್ಚು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅತಂತ್ರಗೊಂಡಿದೆ.  ಕಳೆದ 118 ವರ್ಷಗಳಲ್ಲೇ ಮ್ಯಾಥ್ಯೂ ಅತ್ಯಂತ ವಿನಾಶಕಾರಿ ಚಂಡಮಾರುತವಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಹವಾಮಾನ ಸೇವಾ ಸಂಸ್ಥೆ ತಿಳಿಸಿದೆ.

Hyti-02

Hyti 3

Hyti 2

► Follow us on –  Facebook / Twitter  / Google+

Facebook Comments

Sri Raghav

Admin