ಚಂದನವನದಲ್ಲಿ ‘ಅಮೂಲ್ಯ’ ಮದುವೆ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Amulya--01

ಬೆಂಗಳೂರು, ಮೇ 11– ಚೆಲುವಿನ ಚಿತ್ತಾರದ ಬೆಡಗಿ ಹಾಗೂ ಸ್ಯಾಂಡಲ್‍ವುಡ್‍ನ ಮುದ್ದುಮುಖದ ಚೆಲುವೆ ಎಂದೇ ಖ್ಯಾತಿ ಆಗಿರುವ ಅಮೂಲ್ಯ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ಅವರ ಸುಪುತ್ರ ಜಗದೀಶ್ ನಾಳೆ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಮದುವೆ ಸಮಾರಂಭದ ಶಾಸ್ತ್ರೋಕ್ತ ಕಾರ್ಯಕ್ರಮಗಳು ಅಮೂಲ್ಯ ಹಾಗೂ ಜಗದೀಶ್ ಮನೆಯಲ್ಲಿ ನೆರವೇರುತ್ತಿದ್ದು, ಇಂದೂ ಸಹ ಬೆಳಗ್ಗೆ ವಧು-ವರರ ಮನೆಯಲ್ಲಿ ಚಪ್ಪರ ಪೂಜೆ ಹಾಗೂ ಅರಿಶಿಣ ಹಚ್ಚುವ ಕಾರ್ಯಕ್ರಮಗಳು ಬಂಧು-ಬಳಗ ಹಾಗೂ ಚಿತ್ರರಂಗದ ಹಲವರ ಉಪಸ್ಥಿತಿಯಲ್ಲಿ ನಡೆಯಿತು.ನಿನ್ನೆಯಷ್ಟೇ ಗೋಲ್ಡನ್‍ಸ್ಟಾರ್ ಗಣೇಶ್ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದ್ದು, ಸ್ಯಾಂಡಲ್‍ವುಡ್‍ನ ನಟ, ನಟಿಯರು ಸೇರಿದಂತೆ ಅನೇಕ ಕಲಾವಿದರು, ಅಮೂಲ್ಯ ಸ್ನೇಹಿತರು ಪಾಲ್ಗೊಂಡು ಸಂಭ್ರಮಿಸಿದರು.  ಎಲ್ಲಾ ಚಿತ್ರ ತಾರೆಯರ ಮನೆಗೆ ಖುದ್ದಾಗಿ ಭೇಟಿ ನೀಡಿದ್ದ ಅಮೂಲ್ಯ ತಮ್ಮ ಮದುವೆಯ ಮಮತೆಯ ಕರೆಯೋಲೆಯನ್ನು ನೀಡಿ ಆಹ್ವಾನಿಸಿದ್ದರು.  ನಾಳೆ 12ರಿಂದ 12.30ರ ಶುಭ ಲಗ್ನದಲ್ಲಿ ಅಮೂಲ್ಯ, ಜಗದೀಶ್ ಅವರನ್ನು ವರಿಸಲಿದ್ದಾರೆ. ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಮದುವೆ ನೆರವೇರಲಿದ್ದು, ಇಂದು ಸಾಂಪ್ರದಾಯಿಕ ಪೂಜೆಗಳ ನಂತರ ಎರಡೂ ಮನೆಯವರು ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಲಿದ್ದು, ನಾಳೆ ದೇವರ ಸನ್ನಿಧಿಯಲ್ಲಿ ವಿವಾಹ ನೆರವೇರಲಿದೆ.

ಮದುವೆ ಸಮಾರಂಭದಲ್ಲಿ ಸ್ಯಾಂಡಲ್‍ವುಡ್‍ನ ನಾಯಕರಾದ ಯಶ್, ಸುದೀಪ್, ಪುನೀತ್, ದರ್ಶನ್ ಸೇರಿದಂತೆ ರಾಜಕೀಯ ವಲಯದ ಯಡಿಯೂರಪ್ಪ, ಅಶೋಕ್‍ರಂತಹ ಗಣ್ಯಾತಿ ಗಣ್ಯರು ಪಾಲ್ಗೊಂಡು ವಧು-ವರರಿಗೆ ಶುಭ ಹಾರೈಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin