ಚಂದ್ರನ ಮೇಲೆ ಗ್ರಾಮ ಸ್ಥಾಪನೆಗೆ ಯುರೋಪ್-ಚೀನಾ ಜಂಟಿ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Moon-Village--01

ಲಂಡನ್, ಮೇ 1- ಚಂದ್ರನ ಮೇಲೆ ಗ್ರಾಮವೊಂದನ್ನು ನಿರ್ಮಿಸುವ ಬಗ್ಗೆ ಯುರೋಪ್ ಮತ್ತು ಚೀನಾ ಮಹತ್ವದ ಯೋಜನೆಯೊಂದನ್ನು ರೂಪಿಸುತ್ತಿವೆ. ಮಂಗಳಗ್ರಹ ಸೇರಿದಂತೆ ಬಾಹ್ಯಾಕಾಶಕ್ಕೆ ಗಗನನೌಕೆಗಳನ್ನು ರವಾನಿಸಲು ಅಥವಾ ಅಂತರಿಕ್ಷ ಪ್ರವಾಸ ಕೈಗೊಳ್ಳಲು ಹಾಗೂ ಚಂದಿರನ ಅಂಗಳದಲ್ಲಿ ಗಣಿಗಾರಿಕೆ (ಇಂಧನ ಉತ್ಪಾದನೆ) ಇತ್ಯಾದಿ ಉದ್ದೇಶಗಳಿಗೆ ಈ ವ್ಯೂಮ ಗ್ರಾಮವನ್ನು ಬಳಸಬಹುದಾಗಿದೆ.   ಚಂದ್ರನಲ್ಲಿ ನೆಲೆಯೊಂದನ್ನು ಸ್ಥಾಪಿಸುವ ಬಗ್ಗೆ ಮತ್ತು ಸಾಧ್ಯವಿರಬಹುದಾದ ಇತರ ಯೋಜನೆಗಳ ಬಗ್ಗೆ ಜಂಟಿಯಾಗಿ ಯಾವ ರೀತಿ ಪರಸ್ಪರ ಸಹಕಾರ ನೀಡಬಹುದು ಎಂಬ ಬಗ್ಗೆ ಯೂರೋಪ್ ಮತ್ತು ಚೀನಾದ ಬಾಹ್ಯಾಕಾಶ ಪ್ರತಿನಿಧಿಗಳು ಚರ್ಚಿಸಿದ್ದಾರೆ. 

ಚೀನಾ ಬಾಹ್ಯಾಕಾಶ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಟಿಯಾನ್ ಯುಲಾಂಗ್ ಈ ಬಗ್ಗೆ ಮೊದಲ ಬಾರಿಗೆ ಮಾಹಿತಿ ನೀಡಿದ್ದಾರೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಈಎಸ್‍ಎ) ವಕ್ತಾರ ಪಾಲ್ ಹೆವಿಸ್ಟಾಂಡಲ್ ಇದನ್ನು ಖಚಿತಪಡಿಸಿದ್ದಾರೆ. ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ ಮತ್ತು ಗ್ರಾಮ ಸ್ಥಾಪನೆ ಯೋಜನೆ ಬಗ್ಗೆ ಯುರೋಪ್ ಮತ್ತು ಚೀನಾದಲ್ಲಿ ಈಗಾಗಲೇ ಮೊದಲ ಹಂತದ ಸಿದ್ದತೆಗಳು ನಡೆದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin