ಚಂದ್ರಶೇಖರ ಆಜಾದ್ ಹುಟ್ಟೂರಿಗೆ ಭೇಟಿ ನೀಡಲಿರುವ ಮೊದಲ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-01

ಭೂಪಾಲ್, ಆ.9-ಕ್ರಾಂತಿಕಾರಿ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಅಜಾದ್ ಅವರ ಸ್ವಗ್ರಾಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಪ್ರಥಮ ಬಾರಿಗೆ ಭೇಟಿ ನೀಡಿದ್ದಾರೆ.
ಸ್ವಾತಂತ್ರ್ಯಾನಂತರ ಪ್ರಧಾನಿಯೊಬ್ಬರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.  ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸ್ವಾತಂತ್ರ್ಯಕ್ಕಾಗಿ ವೀರಮರಣವನ್ನಪ್ಪಿದ ಹೋರಾಟಗಾರರ ನೆನಪಿನ ಕಾರ್ಯಕ್ರಮದಲ್ಲಿ  ಭಾಗವಹಿಸಲು ಮೋದಿ ಅಲಿರಾಜಪುರ ಜಿಲ್ಲೆಯ ಬಾಬ್ರ ಸಮೀಪದ ಹಳ್ಳಿಗೆ ಭೇಟಿ ನೀಡಿದ್ದಾರೆ. ಸ್ವಾತಂತ್ರ್ಯಾನಂತರ ಅಜಾದ್ ಅವರ ಹುಟ್ಟೂರಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರರಾಗಲಿದ್ದಾರೆ.

70 ಸಾಲ್ ಆಜಾದಿ, ಯಾದ್ ಕರೋ ಖುರ್‍ಬಾನಿ ಕಾರ್ಯಕ್ರಮಕ್ಕೆ  ತೆರಳಿದ ಬಳಿಕ,  ಬಾಬ್ರದಿಂದ 10 ಕಿ.ಮೀ. ದೂರದಲ್ಲಿರುವ ಜೋತ್ರಹಳ್ಳಿಗೆ ತೆರಳಿ ಅಲ್ಲಿನ ಸಭೆಯೊಂದರಲ್ಲಿ ಪಾಲ್ಗೊಂಡು ಮೋದಿ ಭಾಷಣ ಮಾಡಿದರು.  ಚಂದ್ರಶೇಖರ್ ಆಜಾದ್ ಅವರ ನೆನಪಿಗಾಗಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಜೋತ್ರಾದ ಗ್ರಾಮವನ್ನು ಚಂದ್ರಶೇಖರ್ ಆಜಾದ್ ನಗರ ಎಂದು ಮರುನಾಮಕರಣ ಮಾಡಿದೆ.

 

Facebook Comments

Sri Raghav

Admin