ಚನ್ನಪಟ್ಟಣದಲ್ಲಿ ಕೋಮು ಸಂಘರ್ಷ, ಉದ್ರಿಕ್ತ ವಾತಾವರಣ

ಈ ಸುದ್ದಿಯನ್ನು ಶೇರ್ ಮಾಡಿ

Communal-Clash

ಚನ್ನಪಟ್ಟಣ, ಜ.31- ಈದ್ಗಾ ಮೈದಾನಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ನ್ಯಾಯಾಲಯದ ಸಂಕೀರ್ಣಕ್ಕೆ ದಾರಿ ಬಿಡುವ ವಿಷಯದಲ್ಲಿ ವಾಗ್ವಾದ ನಡೆದಿದ್ದು, ಅದು ಕೋಮು ಸಂಘರ್ಷಕ್ಕೆ ತಿರುಗಿದೆ.

ಚನ್ನಪಟ್ಟಣದಲ್ಲಿರುವ ಆರು ಎಕರೆ ಜಮೀನು ಪೈಕಿ ನಾಲ್ಕು ಎಕರೆಯನ್ನು ನ್ಯಾಯಾಲಯ ಸಂಕೀರ್ಣಕ್ಕೆ ನೀಡಲಾಗಿದ್ದು, ಅಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ಆ ಕಟ್ಟಡದ ಉದ್ಘಾಟನೆ ಫೆ.2ರಂದು ನಡೆಯಲಿದೆ. ಆದರೆ, ಪಕ್ಕದಲ್ಲೇ ಇದ್ದ ಈದ್ಗಾ ಮೈದಾನದಿಂದ ಹಾದು ಹೋಗಬೇಕಾಗಿದ್ದ ರಸ್ತೆಗೆ ಕೆಲವರು ತಾತ್ಕಾಲಿಕ ತಡೆಗೋಡೆ ನಿರ್ಮಿಸಿದ್ದರಿಂದ ಗಲಾಟೆ ಆರಂಭವಾಗಿದೆ.

ನ್ಯಾಯಾಲಯದ ಸಂಕೀರ್ಣಕ್ಕೆ ನೀಡಿದ್ದ ಜಮೀನಿಗೆ ಪರ್ಯಾಯವಾಗಿ ಬೇರೆ ಕಡೆ ಜಮೀನು ನೀಡುವುದಾಗಿ ಈ ಹಿಂದೆ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ಭರವಸೆ ನೀಡಿದ್ದರು. ಆದರೆ, ಅದು ಈಡೇರಿಲ್ಲ ಎಂಬ ಆರೋಪ ಕೇಳಿಬಂದಿದೆ.

ನ್ಯಾಯಾಲಯದ ಸಂಕೀರ್ಣದ ಬಳಿ ಹಾದು ಹೋಗುವ ರಸ್ತೆಗೆ 10 ಅಡಿ ಜಾಗ ಬಿಟ್ಟುಕೊಡಬೇಕಿತ್ತು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವರು ಈದ್ಗಾ ಮೈದಾನಕ್ಕೆ ಪರ್ಯಾಯವಾಗಿ ಜಮೀನು ಕೊಟ್ಟಿಲ್ಲ. ಆಗಾಗಿ ನಾವು 10 ಅಡಿ ಜಾಗ ಕೊಡವುದಿಲ್ಲ ಎಂದು ತಡೆಗೋಡೆ ನಿರ್ಮಿಸಿದ್ದರು ಎನ್ನಲಾಗಿದೆ.

ಕೆಲವರು ಪೊಲೀಸರು ಮತ್ತು ಸಾರ್ವಜನಿಕರು ಈ ತಾತ್ಕಾಲಿಕ ತಡೆಗೋಡೆಯನ್ನು ತೆರವುಗೊಳಿಸಿದ್ದರಿಂದ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದ್ದು, ಇನ್ನು ಕೆಲವರು ಹೆದ್ದಾರಿಯನ್ನು ತಡೆ ಪ್ರತಿಭಟನೆ ನಡೆಸಿದ್ದಾರೆ.

ಎರಡೂ ಕೋಮಿನ ಜನರು ಗುಂಪು ಗೂಡಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

Facebook Comments

Sri Raghav

Admin